ಜಿಲ್ಲೆ

ಕೋವಿಡ್ ಆರೈಕೆ ಕೇಂದ್ರಕ್ಕೆ ಜಿಕೆವಿಕೆ ಹಾಸ್ಟೆಲ್ ಬಳಕೆ

Mandara

ಬೆಂಗಳೂರು: ರಾಜಧಾನಿಯಲ್ಲಿ ಕರೊನಾ ಸೋಂಕಿತರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗ ಲಕ್ಷಣಗಳಿಲ್ಲದ ಸೋಂಕಿತರ ಚಿಕಿತ್ಸೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಸರ್ಕಾರಿ ಆಯುರ್ವೆದ ಆಸ್ಪತ್ರೆ ಹಾಗೂ ವಿವಿಧ ಹೋಟೆಲ್​ಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಬಿಬಿಎಂಪಿ ಮುಂದಾಗಿದೆ.

ಕರೊನಾ ರೋಗ ಲಕ್ಷಣಗಳು ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿ (ಸಿಸಿಸಿ), ಗಂಭೀರವಲ್ಲದ ಮಧ್ಯಮ ಪ್ರಮಾಣದ ಲಕ್ಷಣಗಳು ಇರುವವರನ್ನು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ (ಡಿಸಿಎಚ್​ಸಿ) ಹಾಗೂ ಗಂಭೀರವಾಗಿರುವ ಸೋಂಕಿತರನ್ನು ಮೀಸಲಿಡಲಾದ ಕೋವಿಡ್ ಆಸ್ಪತ್ರೆಗಳಲ್ಲಿರಿಸಿ (ಡಿಸಿಎಚ್) ನಿರ್ವಹಣೆ ಮಾಡಲಾಗುವುದು.

ಆರೈಕೆ ಕೇಂದ್ರಗಳು ಎಲ್ಲೆಲ್ಲಿ ಇವೆ? ಹಜ್ ಭವನದಲ್ಲಿ 400, ಶ್ರೀ ಶ್ರೀ ರವಿಶಂಕರ ಗುರೂಜಿ ಆಶ್ರಮದಲ್ಲಿ 400 ಹಾಸಿಗೆಗಳ ಕರೊನಾ ಕೇರ್ ಸೆಂಟರ್ ಆರಂಭಿಸಲಾಗಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 400, ಇಂಜಿನಿಯರಿಂಗ್ ಕಾಲೇಜುಗಳಲ್ಲಿ 3,200, ಖಾಸಗಿ ಹೋಟೆಲ್​ಗಳಲ್ಲಿ 1,500 ಹಾಸಿಗೆ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿಯೂ ಸಾವಿರಾರು ಹಾಸಿಗೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ರಾಜ್ಯದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರಿಗೆ ವಿವಿಧೆಡೆಯಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು, ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚುವರಿ ಕೇಂದ್ರಗಳನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಯುರ್ವೆದ ಕಾಲೇಜಿನಲ್ಲಿ 200 ಹಾಸಿಗೆ, ಜಿಕೆವಿಕೆ ವಿದ್ಯಾರ್ಥಿನಿಲಯಗಳ 1,000 ಹಾಸಿಗೆ, ಹೋಟೆಲ್ ಸಿಟಿ ಸೆಂಟಾರ್ ಇಂಟರ್ ನ್ಯಾಷನಲ್​ನ 400 ಹಾಸಿಗೆ, ಚಾನ್ಸರಿ ಪೆವಿಲಿಯನ್ ರೆಸಿಡೆನ್ಸಿಯಲ್ಲಿ 200 ಹಾಸಿಗೆಗಳನ್ನು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅನುಸಾರ ವಶಕ್ಕೆ ಪಡೆದು ಕೋವಿಡ್ ಆರೈಕೆಗೆ ಸಿದ್ಧಪಡಿಸಲು ಆಯಾ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಎನ್​ಜಿವಿ ಒಳಾಂಗಣ ಕ್ರೀಡಾಂಗಣಕ್ಕೆ ಶಿಫ್ಟ್: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲು ಸಿದ್ಧತೆ ಮಾಡಲಾಗಿತ್ತು. ಆದರೆ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಗೋವಿಂದರಾಜು ಮನವಿ ನ್ನೆಲೆಯಲ್ಲಿ ಕಂಠೀರವದಲ್ಲಿ ಸಿದ್ಧತೆಗೆ ಮುಂದಾಗಿದ್ದ ಹಾಸಿಗೆ ಗಳನ್ನು ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ (ಎನ್​ಜಿವಿ) ಕ್ರೀಡಾಂಗಣಕ್ಕೆ ಸ್ಥ§ಳಾಂತರಿಸಲಾಗಿದೆ.