ರಾಯಚೂರು: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಮನನೊಂದು ಅಪ್ರಾಪ್ತ ವಯಸ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ತಾಲ್ಲೂಕಿನ ಅರಷಣಗಿ ಗ್ರಾಮದಲ್ಲಿ ನಡೆದಿದೆ.
ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬೇಸತ್ತು ಅಪ್ರಾಪ್ತ ವಯಸ್ಕಳು ಆತ್ಮಹತ್ಯೆ ಮಾಡಿಕೊಂಡಡು ಸಾವಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ರಾಯಚೂರು ಮಹಿಳಾ ಠಾಣಾ ಪೊಲೀಸರು ಆರೋಪಿ ರಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯೂ ಜುಲೈ 30ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ರಮೇಶ್ ಹಾಗೂ ಅಪ್ರಾಪ್ತ ವಯಸ್ಕೆ ಇಬ್ಬರು ಒಂದೇ ಗ್ರಾಮದವರಾಗಿದ್ದು, ನೆರೆ ಹೊರೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಆರೋಪಿ ಹಾಗೂ ಬಾಲಕಿಯನ್ನು ಇಬ್ಬರು ಪ್ರೀತಿಸುತ್ತಿದ್ದರು, ಈ ವಿಚಾರ ಆಕೆಯ ಪೋಷಕರಿಗೆ ತಿಳಿದು ಶಾಲೆ ಬಿಡಿಸಿ ತಮ್ಮ ಸಂಬಂಧಿಕರಲ್ಲೇ ಗಂಡು ಹುಡುಕಿದ್ದರು.
ಈ ವಿಚಾರ ತಿಳಿದ ಆರೋಪಿ ರಮೇಶ್ ಅಪ್ರಾಪ್ರ ವಯಸ್ಕಳ ಮನೆಗೆ ನುಗ್ಗಿ ಗಲಾಟೆ ಮಾಡಿದ್ದನ್ನು. ನಂತರ ಆಕೆ ಮದುವೆಯಾಗಬೇಕಿದ್ದ ಹುಡುಗನಿಗೆ ಆಕೆ ಜೊತೆ ತೆಗೆಸಿಕೊಂಡಿದ್ದ ಫೋಟೋ, ವಾಯ್ಸ್ ಮೆಸ್ಸೇಜ್ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದ. ಇದನ್ನೆಲ್ಲಾ ನೋಡಿದ ವರನ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದರು.
ಮದುವೆ ಕ್ಯಾನ್ಸಲ್ ಆದ ವಿಚಾರ ತಿಳಿದು ಬಾಲಕಿಯ ತಂದೆ ಖಿನ್ನತೆಗೆ ಒಳಗಾಘಿ ಆಸ್ಪತ್ರೆಗೆ ಸೇರಿದ್ದರು. ಇಷ್ಟಾದರು ಸುಮ್ಮನಾಗದ ಆರೋಪಿಯು ಬಾಲಕಿಗೆ ತನ್ನನ್ನು ಮದುವೆಯಾಗುವಂತೆ ಪೀಡಿಸಿದ್ದಾನೆ. ನಡೆದ ಘಟನೆಗಳಿಂದ ತೀವ್ರವಾಗಿ ಮನನೊಂದಿದ್ದ ಅಪ್ರಾಪ್ತ ವಯಸ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ಸಂಬಂಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್ನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ಧಾರೆ.