ಮೃತ ಸಾನಿತಾ  
ಜಿಲ್ಲೆ

ಜೋಕಾಲಿ ಆಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕಿ

Webdesk - Manjunatha B

ಹಾಸನ: ಜೋಕಾಲಿ ಆಡಲು ಹೋಗಿ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ,‌ ವನಗೂರು ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಸಾನಿತಾ (9) ಎಂದು ಗುರುತಿಸಲಾಗಿದ್ದು, ಜೋಕಾಲಿ ಆಡುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬಸವರಾಜು ಬೇಬಿ ದಂಪತಿಯ ಏಕೈಕ ಪುತ್ರಿ ಸಾನಿತಾ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮನೆಯೊಳಗೆ ಜೋಕಾಲಿ ಆಡಲು ಸಾನಿತಾ ಸೀರೆ ಕಟ್ಟಿದ್ದಳು. ಆಟ ಆಡುವ ವೇಲೆ ಆಯತಪ್ಪಿ ಕುತ್ತಿಗೆಗೆ ಸೀರೆ ಬಿಗಿದ ಕಾರಣ ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಸಳೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಸಾನಿತಾ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.