ಘಟ್ಟಿರಡ್ಡಿಹಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷ ಅಂದಾನಪ್ಪ ಉದ್ಘಾಟಿಸಿದರು. ಉಪಾಧ್ಯಕ್ಷ ಪ್ರಕಾಶ, ನಿರ್ದೇಶಕರಾದ ಅಂದಪ್ಪ, ಸುರೇಶ, ಶಿವನಗೌಡ, ಉಮೇಶ, ಲಕ್ಷ್ಮವ್ವ, ಯಲ್ಲವ್ವ, ಪಾರವ್ವ, ದೇವಪ್ಪ, ಬಸಪ್ಪ ಇನ್ನಿತರರಿದ್ದರು. 
ಜಿಲ್ಲೆ

ಸಾಲ ಮರುಪಾವತಿಸಿದಾಗ ಸಂಘ ಅಭಿವೃದ್ಧಿ

ಅಳವಂಡಿ: ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ನಂಬಿಕೆ, ಪ್ರಾಮಾಣಿಕತೆ ಹಾಗೂ ಸಹಕಾರ ತತ್ವ ಅಳವಡಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಅಂದಾನಪ್ಪ ಡಂಬಳ ತಿಳಿಸಿದರು.

ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ನಂಬಿಕೆ ಅಗತ್ಯ

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಸರಕಾರದ ಮಾರ್ಗಸೂಚಿಯಂತೆ ಸಂಘ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಸದಸ್ಯರು ಅವುಗಳ ಉಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಕಾಲಕ್ಕೆ ಸಾಲವನ್ನು ಮರುಪಾವತಿಸಿದಾಗ ಸಂಘಗಳು ಪ್ರಗತಿ ಹೊಂದಲಿವೆ ಎಂದರು.

ಸಾವಯವ ಕೃಷಿಕ ಬೆಳಗಟ್ಟಿ ಗ್ರಾಮದ ನಿಂಗಪ್ಪ ಚಿಲವಾಡಗಿ, ಖ್ಯಾತ ಯೋಗಪಟು ರೇಷ್ಮಾ ವಡ್ಡಟ್ಟಿ, ಗ್ರಾಹಕ ಅಂಜುನೆಪ್ಪ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಪ್ರಕಾಶ ಹಳ್ಳಿಗುಡಿ, ನಿರ್ದೇಶಕರಾದ ಅಂದಪ್ಪ ಡಂಬಳ, ಸುರೇಶ, ಶಿವನಗೌಡ ಅಲ್ಲಿಪುರ, ಉಮೇಶ ಡಂಬಳ, ಲಕ್ಷ್ಮವ್ವ ಪೂಜಾರ, ಯಲ್ಲವ್ವ ವಾಲಿಕಾರ, ಪಾರವ್ವ ಗಿರಡ್ಡಿ, ದೇವಪ್ಪ, ಬಸಪ್ಪ, ರೇಣವ್ವ, ಪ್ರಮುಖರಾದ ಪಂಚಪ್ಪ ಭಾವಿ, ಸುರೇಶ ಚನ್ನಳ್ಳಿ, ಶೇಖರಪ್ಪ ಸಂಗರಡ್ಡಿ, ಮಲ್ಲಪ್ಪ, ಸಂದೀಪ, ವೀರಣ್ಣ, ಶೇಖರಪ್ಪ ಇನ್ನಿತರರಿದ್ದರು.