ಜಿಲ್ಲೆ

ಮೊಗವೀರಪೇಟೆ ದೇವಸ್ಥಾನದಲ್ಲಿ ಗೆಂಡೋತ್ಸವ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗಬ್ರಹ್ಮ, ಶ್ರೀ ಪರಿವಾರ ದೇವತಾ ಬೊಬ್ಬರ್ಯೇಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಾರ್ಷಿಕ ಮಕರ ಸಂಕ್ರಮಣ ಜಾತ್ರೆ, ಗೆಂಡೋತ್ಸವ ಹಾಗೂ ಅನ್ನಸಂತರ್ಪಣೆ ಜರುಗಿತು.

ಜ.14ರಂದು ಮಕರ ಸಂಕ್ರಾಂತಿಯಂದು ಪಡು ದೇವಸ್ಥಾನ ನಾಗದೇವರಿಗೆ ಕಲಾಹೋಮ, ನವಕಲಶ ಸ್ಥಾಪನೆ, ಕಲಶಾಭಿಷೇಕ ಮಹಾಮಂಗಳಾರತಿ, 15ರಂದು ಬೆಳಗ್ಗೆ ಶ್ರೀ ದುರ್ಗಾಪರಮೇಶ್ವರಿ, ಕಪ್ಪಣ್ಣ ಸ್ವಾಮಿ ಸಾನ್ನಿಧ್ಯದಲ್ಲಿ ನವಕಲಶ ಸ್ಥಾಪನೆ, ಪರಿವಾರ ಬೊಬ್ಬರ್ಯೇಶ್ವರ ಸಾನ್ನಿಧ್ಯದಲ್ಲಿ ಪಂಚವಿಂಶತಿ ಕಲಶ ಸ್ಥಾಪನೆ, ಕಲಾತತ್ವ ಹೋಮ, ಮಧ್ಯಾಹ್ನ ಕಲಶಾಭಿಷೇಕ, ಮಹಾಮಂಗಳಾರತಿ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಗೆಂಡೋತ್ಸವ, ಸುತ್ತುಬಲಿ, ಅನ್ನಸಂತರ್ಪಣೆ, ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿ ಉಡುಪಿ ಅವರಿಂದ ಡಾನ್ಸ್ ಧಮಾಕಾ ಕಾರ್ಯಕ್ರಮ ಜರುಗಿತು. ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಆನಂದ ಮರಕಾಲ, ಸದಸ್ಯರು, ಗುರಿಕಾರರು, ಪಾತ್ರಿಗಳು, ಊರ ಹತ್ತು ಸಮಸ್ತರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.