ಪಡುಬಿದ್ರಿ: ಬೀಚ್ ಸಂಪರ್ಕ ರಸ್ತೆ ಬದಿಯ ಭತ್ತದ ಕೃಷಿ ಭೂಮಿಗಳಿಗೆ ಕಿಡಿಗೇಡಿಗಳು ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ. ಗದ್ದೆ ಉಳುಮೆ ಸಮಯದಲ್ಲಿ ತ್ಯಾಜ್ಯ ತೆರವು ಮಾಡಿ ಭತ್ತ ನಾಟಿ ಮಾಡಲಾಗಿತ್ತು. ಗದ್ದೆ ಸುತ್ತ ಬೆಳೆದಿರುವ ಹುಲ್ಲು ಕಟಾವು ವೇಳೆ ತ್ಯಾಜ್ಯು ತುಂಬಿರುವ ಗೋಣಿಚೀಲಗಳು ಪತ್ತೆಯಾಗಿವೆ.
ವಾಹನಗಳಲ್ಲಿ ಹೋಗುವವರು ತ್ಯಾಜ್ಯಗಳನ್ನು ಗದ್ದೆಗಳಿಗೆ ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಗ್ರಾಪಂ ಗಮನಕ್ಕೂ ತರಲಾಗಿದೆ. ಭತ್ತ ಬೆಳೆಯುವುದೇ ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಇಂತಹ ವಿಕೃತಿ ಮರೆಯುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಕೃಷಿಕ ಹರೀಶ್ ದೇವಾಡಿಗ ಆಗ್ರಹಿಸಿದ್ದಾರೆ.