ಕಾಸರಗೋಡು: ಗಾಂಜಾ ಮಾರಾಟ ಮಾಡುತ್ತಿದ್ದ ಅಟ್ಟೆಗೋಳಿ ನಿವಾಸಿ ಜನಾರ್ದನ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಲ್ಲಿದ್ದ 38 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮನೆಗೆ ತೆರಳಿ ಗಾಂಜಾ ಪೂರೈಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಠಾಣೆ ಎಸ್.ಐ ನಿಖಿಲ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಗಾಂಜಾ ಸಾಗಾಟ ಪ್ರಕರಣದಲ್ಲಿ ಈತನ ಪುತ್ರ ಕಿರಣ್ ಎಂಬಾತ ಈ ಹಿಂದೆ ಆರೋಪಿಯಾಗಿದ್ದ.