ಜಿಲ್ಲೆ

7.9 ಕೆ.ಜಿ. ಗಾಂಜಾ ಸಾಗಿಸುತ್ತಿದ್ದಾತ ಸೆರೆ

ಸೌಮ್ಯ ಆರ್

ಕಾಸರಗೋಡು: ಕುಂಬಳೆ ಠಾಣೆ ಎಸ್.ಐ ಕೆ.ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಕುಂಬಳೆ ಸನಿಹದ ಅಡ್ಕ ಬೈದಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 7.9 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶಿರಿಯ ಒಳಯಂ ನಿವಾಸಿ ರಾವುಫ್ ಎಂಬಾತನನ್ನು ಬಂಧಿಸಿದ್ದಾರೆ. ಆತ ಸಂಚಾರಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಗುರುವಾರ ತಡರಾತ್ರಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಆಗಮಿಸಿದ ಕಾರು ತಡೆದು ತಪಾಸಣೆ ನಡೆಸಿದಾಗ ಹಿಂಬದಿ ಸೀಟಿನಡಿ ಸಂಗ್ರಹಿಸಿಡಲಾಗಿದ್ದ ಗಾಂಜಾ ಪತ್ತೆಯಾಗಿತ್ತು. ಆರೋಪಿ ಕುಂಬಳೆ ಆಸುಪಾಸು ಗಾಂಜಾ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.