ಮನೆ ಮನೆ ವಿತರಣಾ ಅಭಿಯಾನ ಅಂಗವಾಗಿ ಗಂಗಾವತಿ ಶ್ರೀರಾಮ ಮಂದಿರದಲ್ಲಿ ಹಿಂದು ಪರ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಸದ್ಭಾವನಾ ಸಂಸ್ಥೆ ಪ್ರಮುಖ ಸುಬ್ರಮಣ್ಯ ರಾಯ್ಕರ್, ಹಿಂದು ಪರ ಸಂಘಟನೆ ಪದಾಧಿಕಾರಿಗಳಾದ ಅನಿಲ್ ಕುಷ್ಟಗಿ, ರಾಜೀವ್ ಕುಲ್ಕರ್ಣಿ ಇತರರಿದ್ದರು. 
ಜಿಲ್ಲೆ

ಅಯೋಧ್ಯೆಯ ಆಹ್ವಾನ ಪತ್ರಿಕೆಗೆ ವಿಶೇಷ ಪೂಜೆ

ಗಂಗಾವತಿ: ನಗರದ ಶ್ರೀರಾಮ ಮಂದಿರದಲ್ಲಿ ಭಾನುವಾರ ಅಯೋಧ್ಯೆಯ ಆಹ್ವಾನ ಪತ್ರಿಕೆ ಹಾಗೂ ಅಕ್ಷತೆ ಮನೆ ಮನೆಗೆ ವಿತರಣಾ ಅಭಿಯಾನದ ಚಾಲನೆ ಅಂಗವಾಗಿ ಹಿಂದು ಕಾರ್ಯಕರ್ತರು ವಿಶೇಷ ಪೂಜೆಯನ್ನು ಸಲ್ಲಿಸಿದರು.

ಮನೆ ಮನೆಗೆ ವಿತರಣಾ ಅಭಿಯಾನಕ್ಕೆ ಚಾಲನೆ

ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪಣೆ ಜರುಗಲಿದೆ. ಹೀಗಾಗಿ ಆಹ್ವಾನಕ್ಕಾಗಿ ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆ ಬಂದಿವೆ. ನಗರದ ಸುಶಮೀಂದ್ರ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಾರ್ಡ್‌ಗೊಬ್ಬರಂತೆ ಪ್ರಮುಖರನ್ನು ನಿಯೋಜಿಸಲಾಗಿದೆ . ಅವರು ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ.

ಸದ್ಭಾವನಾ ಸಂಸ್ಥೆ ಪ್ರಮುಖ ಸುಬ್ರಮಣ್ಯ ರಾಯ್ಕರ್, ಹಿಂದು ಪರ ಸಂಘಟನೆ ಪದಾಧಿಕಾರಿಗಳಾದ ಅನಿಲ್ ಕುಷ್ಟಗಿ, ರಾಜೀವ್ ಕುಲ್ಕರ್ಣಿ, ಹರೀಶ್ ಕುಲ್ಕರ್ಣಿ, ದಾಸನಾಳ ವೆಂಕಟೇಶ, ಬದರಿನಾರಾಯಣ ಇತರರಿದ್ದರು. ಮರಳಿ: ತಾಲೂಕಿನ ಮರಳಿ ಶರಣಬಸವೇಶ್ವರ ದೇವಾಲಯದಲ್ಲಿ ಅಯೋಧ್ಯೆಯ ಆಮಂತ್ರಣ ಪತ್ರಿಕೆ ಹಾಗೂ ಮಂತ್ರಾಕ್ಷತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮರಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿತರಿಸಲು ಕಾರ್ಯಕರ್ತರ ಪಡೆ ರಚಿಸಲಾಗಿದೆ. ಮುಖಂಡರಾದ ದೊಡ್ಡಬಸನಗೌಡ ಮಾಲಿ ಪಾಟೀಲ್, ಸಂತೋಷ ಕುಮಾರ, ಚಂದ್ರಪ್ಪ ಕಲ್ಗುಡಿ, ಸಣ್ಣ ವೆಂಕೋಬ, ರಮೇಶ ನಾಯಕ, ಹೇಮಂತ, ಮಂಜುನಾಥ ಸೂಗೂರು, ಕೀರಪ್ಪ ನಾಯಕ ಇತರರಿದ್ದರು.