ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃಮಂಡಳಿಯ ನೇತೃತ್ವದಲ್ಲಿ ಮಾರ್ಚ್ 9ರಂದು ನಡೆಯಲಿರುವ ಪವಿತ್ರ ಗಂಗಾಪೂಜೆ ಮಾತೃ ಸಂಗಮ ಕಾರ್ಯಕ್ರಮದ ಆಮಂತ್ರಣಪತ್ರ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.
ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದ ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ನಡೆಯುವ ಪವಿತ್ರ ಗಂಗಾಪೂಜಾ ಕಾರ್ಯಕ್ರಮವನ್ನು ಸಾಮರಸ್ಯ ಸಮಾಜದ ನಿರ್ಮಾಣದ ಸಂಕಲ್ಪದೊಂದಿಗೆ ನಡೆಸಿಕೊಂಡು ಬರಲಾಗುತ್ತಿದ್ದು, ಮಾತೃ ಜಾಗೃತಿಗಾಗಿ ಮಾತೃಸಂಗಮ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತೃಮಂಡಳಿಯ ಪ್ರಧಾನ ಸಂಚಾಲಕಿ ಶ್ಯಾಮಲಾ ಶೆಣೈ, ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್, ಜತೆ ಕಾರ್ಯದರ್ಶಿ ಶೋಭಾ ದಯಾನಂದ್, ಪ್ರಮುಖರಾದ ಉಷಾಚಂದ್ರ ಮುಳಿಯ, ಶಶಿಕಲಾ ಭಾಸ್ಕರ್, ಲತಾ, ಪ್ರಮುಖರಾದ ಕೆ.ರಾಘವೇಂದ್ರ ನಾಯಕ್, ಯು.ರಾಜೇಶ್ ಪೈ, ಸುರೇಶ್ ಅತ್ರಮಜಲು, ಹರಿರಾಮಚಂದ್ರ, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುನೀಲ್ ದಡ್ಡು, ರಾಮಚಂದ್ರ ಮಣಿಯಾಣಿ, ಸ್ವರ್ಣೇಶ್ ಗಾಣಿಗ, ಎನ್.ಹರೀಶ್ ನಾಯಕ್, ವಸಂತ ಬಜತ್ತೂರು, ಆದೇಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.