ಜಿಲ್ಲೆ

ಬಿ.ಸಿ.ರೋಡ್ ಹಿಂದು ಧಾರ್ಮಿಕ ಸೇವಾ ಸಮಿತಿ

ಸೌಮ್ಯ ಆರ್

ಬಂಟ್ವಾಳ: ಹಿಂದು ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ 45ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಸೆ.7ರಿಂದ 10ರವರೆಗೆ ವಿವಿಧ ವೈದಿಕ ವಿಧಿ-ವಿಧಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

7ರಂದು ಬೆಳಗ್ಗೆ ಧ್ವಜಾರೋಹಣದ ಬಳಿಕ ಶ್ರೀಗಣೇಶ ಪ್ರತಿಷ್ಠಾಪನಾ ಗಣಹೋಮ, ಭಜನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನೃತ್ಯ ಸಿಂಚನ, ರಾತ್ರಿ ಮಹಾಪೂಜೆ, 8ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಮಂಗಳಾರತಿ, ಸಂಜೆ ಭಜನೆ, ಯಕ್ಷಗಾನ ಬಯಲಾಟ, ಮಹಾಪೂಜೆ ನಡೆಯಲಿದೆ. 9ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಮಂಗಳಾರತಿ, ಸಂಜೆ ಭಜನೆ, ಭಕ್ತಿ ಪ್ರಧಾನ ತುಳು ನಾಟಕ, ಮಹಾಪೂಜೆ, 10ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ, ಬಿ.ಸಿ.ರೋಡು ಚಿಲಿಪಿಲಿ ಬಳಗದಿಂದ ಗೊಂಬೆ ಕುಣಿತ, ಮಹಾಪೂಜೆ, ವಿಸರ್ಜನಾ ಪೂಜೆಯ ಬಳಿಕ ಶ್ರೀಗಣೇಶ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫರಂಗಿಪೇಟೆಯಲ್ಲಿ 108 ತೆಂಗಿನಕಾಯಿ ಗಣಯಾಗ

ಇಲ್ಲಿನ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ 42ನೇ ವರ್ಷದ ಫರಂಗಿಪೇಟೆ ಗಣೇಶೋತ್ಸವ ಸೆ.7ರಿಂದ 9 ರವರೆಗೆ ನಡೆಯಲಿದೆ. 7ರಂದು ಬೆಳಗ್ಗೆ 7.20ಕ್ಕೆ ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆ, ಧ್ವಜಾರೋಹಣ, ಹೋಸ್ತಾರೋಪಣೆ, 108 ತೆಂಗಿನಕಾಯಿ ಗಣಯಾಗ, ಭಜನೆ, ಮಹಾಪೂಜೆ, ಮಧ್ಯಾಹ್ನ ತಾಳಮದ್ದಳೆ, ಸಂಜೆ ನಾಟಕ, ರಾತ್ರಿ ರಂಗಪೂಜೆ, ವಿವಿಧ ಭಜನಾ ಮಂಡಳಿಯಿಂದ ಭಜನೆ, 8ರಂದು ಬೆಳಗ್ಗೆ 108 ತೆಂಗಿನಕಾಯಿಯ ಗಣಯಾಗ, ಭಜನೆ, ರಂಗೋಲಿ ಸ್ಪರ್ಧೆ, ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ, ಮಹಾಪೂಜೆ, ಯಕ್ಷ- ಹಾಸ್ಯ-ವೈಭವ, ಸಂಜೆ ಸಭಾಕಾರ್ಯಕ್ರಮ, ಬಳಿಕ ಭಕ್ತಿಸಂಗೀತ ರಸಮಂಜರಿ, ರಾತ್ರಿ ಪೂಜೆ, ಯಕ್ಷಗಾನ ಬಯಲಾಟ ನಡೆಯಲಿದೆ. 9ಕ್ಕೆ ಬೆಳಗ್ಗೆ 108 ತೆಂಗಿನಕಾಯಿಯ ಗಣಯಾಗ, ಭಜನೆ, ಮಹಾಪೂಜೆ, ಸಂಜೆ ಸಮಾರೋಪ ಸಮಾರಂಭ, ವಿಸರ್ಜನಾ ಪೂಜೆ ಬಳಿಕ ಹೆದ್ದಾರಿಯಲ್ಲಿ ಭವ್ಯವಾದ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಿಮಾರು ಶ್ರೀ ಮಹಮ್ಮಾಯಿ ಸೇವಾ ಸಮಿತಿ

ಇಲ್ಲಿನ ಶ್ರೀ ಮಹಮ್ಮಾಯಿ ಸೇವಾ ಸಮಿತಿ, ಶ್ರೀದೇವಿ ಸೇವಾ ಟ್ರಸ್ಟ್ ಬರಿಮಾರು ಆಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.7 ಮತ್ತು 8ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶ್ರೀಗಣೇಶ ವಿಗ್ರಹ ಪ್ರತಿಷ್ಠಾಪನೆ, ಭಜನೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಯಕ್ಷಗಾನ ಬಯಲಾಟ ಜರುಗಲಿದೆ. 8ರಂದು ಬೆಳಗ್ಗೆ ಪೂಜೆ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮ, ಸಂಜೆ ವಿಸರ್ಜನಾ ಪೂಜೆ ಬಳಿಕ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಮದಪದವಿನಲ್ಲಿ ಶ್ರೀಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ

ಬಂಟ್ವಾಳ ತಾಲೂಕಿನ ವಾಮದಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 41ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ವಾಮದಪದವಿನ ಶ್ರೀ ಗಣೇಶ ಮಂದಿರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.6ರಿಂದ 8 ರವರೆಗೆ ಜರುಗಲಿದೆ. 6ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, ಬಳಿಕ ಶ್ರೀಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ, ಗೌರಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಯಕ್ಷಗಾನ ಬಯಲಾಟ ನಡೆಯಲಿದೆ. 7ರಂದು ಪ್ರಾತಃಪೂಜೆಯ ಬಳಿಕ 108 ತೆಂಗಿನಕಾಯಿಯ ಗಣಹೋಮ, ಧಾರ್ಮಿಕಸಭೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನೆ, ಸಾಂಸ್ಕೃ ತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಯಿಯಲ್ಲಿ 13ನೇ ವರ್ಷದ ಸಂಭ್ರಮ

ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣಾ ಸಮಿತಿ ರಾಯಿ ವಲಯ ಬಂಟ್ವಾಳ ತಾಲೂಕು ವತಿಯಿಂದ 13ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸೆ.7 ಮತ್ತು 8ರಂದು ರಾಯಿ ಪೇಟೆಯಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ಬಳಿಕ ಶ್ರೀಗಣೇಶ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ, ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಭಕ್ತಿರಸಮಂಜರಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 8ರಂದು ಪ್ರಾತಃಕಾಲ ಪೂಜೆ, 10 ಗಂಟೆಗೆ ಯಕ್ಷ ಹಾಸ್ಯ ವೈಭವ ಬಳಿಕ ಧಾರ್ಮಿಕಸಭೆ, ಮಹಾಪೂಜೆ, ಅನ್ನ ಸಂತರ್ಪಣೆ, ನೃತ್ಯ ರಂಜನಿ, ಸಂಜೆ ವಿಸರ್ಜನಾಪೂಜೆ, ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ

ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಸಂಭ್ರಮ ನಡೆಯಲಿದೆ.

ಸೆ.7ರಿಂದ 13ರವರೆಗೆ ಸಾರ್ವಜನಿಕ ಶ್ರೀಗಣೇಶೋತ್ಸವ ವಿವಿಧ ವೈಧಿಕ ವಿಧಿ-ವಿಧಾನ, ಗಣಹೋಮ, ರಂಗಪೂಜೆ, ಮೂಡಪ್ಪ ಸೇವೆ ಹಾಗೂ ಇನ್ನಿತರ ಧಾರ್ಮಿಕ ಹವನಾದಿಗಳು ನೆರವೇರಲಿವೆ. ಗಣೇಶೋತ್ಸವದ ಸುವರ್ಣಮಹೋತ್ಸವದ ಪ್ರಯುಕ್ತ ಶ್ರೀದೇವರಿಗೆ ಚಿನ್ನ ಹಾಗೂ ಬೆಳ್ಳಿಯ ಅಭರಣಗಳ ಸಮರ್ಪಣೆ ನಡೆಯಲಿದೆ. 7ರಂದು ಬೆಳಗ್ಗೆ ಶ್ರೀಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, 13ರಂದು ರಾತ್ರಿ ವೈಭವಪೂರ್ಣ ಶೋಭಾಯಾತ್ರೆ ಜರುಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.