ವಿಶೇಷವಾಗಿ ಅಲಂಕರಿಸಲಾದ ಗಣಪತಿ ದೇವರು 
ಜಿಲ್ಲೆ

ಹರಿಖಂಡಿಗೆ ದೇವಸ್ಥಾನದಲ್ಲಿ ಗಣೇಶ ಚೌತಿ ಸಂಪನ್ನ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಹರಿಖಂಡಿಗೆ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಗಣೇಶ ಚತುರ್ಥಿಯಂದು ಗಣೇಶ ಚೌತಿ ಕಾರ್ಯಕ್ರಮ ಆರಂಭಗೊಂಡು ಮಂಗಳವಾರ ಅನಂತ ಚತುದರ್ಶಿ ತನಕ ಕಾರ್ಯಕ್ರಮ ಜರುಗಿತು. ದೇವರನ್ನು ಅಲಂಕರಿಸಿ ಪೂಜಿಸಿ ವಿಸರ್ಜನೆ ಮಾಡಲಾಯಿತು. ದೇವಸ್ಥಾನದ ಪರ್ಯಾಯ ಅರ್ಚಕ ಎಚ್.ವೆಂಕಟರಮಣ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು. ಪ್ರತಿನಿತ್ಯ ಪೂಜೆ, ಮಹಾಮಂಗಳಾರತಿ, ವಿವಿಧ ಸ್ಪರ್ಧೆಗಳು, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ಗಣಪತಿ ದೇವರಿಗೆ ಪೂಜೆ ಮುಂತಾದ ಕಾರ್ಯಕ್ರಮ, ಪ್ರಸಾದ ವಿತಣೆ, ಮಂಗಳವಾರ ರಾತ್ರಿ ದೇವಳದ ಕೆರೆಯಲ್ಲಿ ಗಣೇಶ ವಿಸರ್ಜನೆ ಜರುಗಿದವು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ದಿನೇಶ್ ಪೈ ಮುನಿಯಾಲು, ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.