ಕಡಬ: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಶ್ರೀಧರ್ಮರಸು ಉಳ್ಳಾಕುಲು, ಪರಿವಾರ ದೈವಗಳ ಪ್ರತಿಷ್ಠಾಪನಾ ದಿನದ ಅಂಗವಾಗಿ ಮಾ.19ರಂದು ಕಲಶ ಸೇವೆ, ಶ್ರೀ ಮಹಾಗಣಪತಿ ಹೋಮ ನಡೆಯಿತು.
ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ದಿವಾಕರ ಬಂಗೇರ ಬೊಳಿಯಾಲ, ಪದ್ಮಪ್ರಸಾದ್ ಕಲಾಯಿ, ಕಾರ್ಯದರ್ಶಿ ಜಯರಾಮ ಗೌಡ ದೊಡ್ಡಮನೆ, ಜತೆ ಕಾರ್ಯದರ್ಶಿಗಳಾದ ತಾರಾನಾಥ ಬೊಳಿಯಾಲ, ಶಿವಾನಂದ ಸೈನಿಕ ನಿಲಯ, ಖಜಾಂಚಿ ಪುರುಷೋತ್ತಮ ಅಂಗಡಿಹಿತ್ಲು, ಬಾಲಕೃಷ್ಣ ಗೌಡ ಅಂಗಡಿಹಿತ್ಲು, ವಿಶ್ವನಾಥ ರೈ ನಡುಕೂಟೇಲು, ಕಿಟ್ಟಣ್ಣ ರೈ ನಡುಕೂಟೇಲು, ಪ್ರತೀಕ್ ರಾಜ್ ಖಂಡಿಗೆ, ಮಿತೇಶ್ ಗೌಡ, ಸುಖೇಶ್ ಮೊದಲಾದವರಿದ್ದರು.