ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ರಕ್ಷಣಾಪುರ ಜವನೆರ್ ವತಿಯಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಕಾಪು ಪಿಲಿ ಪರ್ಬ ಸೀಸನ್-3 ಹುಲಿವೇಷ ಸ್ಪರ್ಧೆಯಲ್ಲಿ ಜಿ.ಬ್ರೋ ಎರ್ಮಾಳ್ ತಂಡ ಪ್ರಥಮ ಸ್ಥಾನಿಯಾಗಿ 1.5 ಲಕ್ಷ ರೂ. ನಗದು ಬಹುಮಾನ ಪಡೆಯಿತು. ಸ್ಪರ್ಧೆಯಲ್ಲಿ ಆಹ್ವಾನಿತ ಪ್ರಮುಖ 9 ತಂಡಗಳು ಭಾಗವಹಿಸಿದ್ದು, ಕುರ್ಕಾಲು ಟೈಗರ್ಸ್ ದ್ವಿತೀಯ 1 ಲಕ್ಷ ರೂ. ಹಾಗೂ ಕಾಪು ಕಿಂಗ್ ಟೈಗರ್ಸ್ ತೃತೀಯ 50 ಸಾವಿರ ರೂ. ಬಹುಮಾನ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ ಮಣಿಪಾಲ್ ಟೈಗರ್ಸ್‌ನ ಯಶ್ವಿ, ಅತ್ಯುತ್ತಮ ಹುಲಿ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿಯ ಅಶ್ವತ್, ಅತ್ಯುತ್ತಮ ತಾಸೆ ಯುವ ಬ್ರಹ್ಮಾವರ, ಅತ್ಯುತ್ತಮ ಕರಿಹುಲಿ ಕಾಡಬೆಟ್ಟು ಟ್ಯಾಲೆಂಟ್ ಟೈಗರ್ಸ್‌ನ ಅಚ್ಚು ಪಾತ್ರರಾದರು.
ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳ 9 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಕಾಪು ರಕ್ಷಣಾಪುರ ಜವನೆರ್ ತಂಡದ ಅಧ್ಯಕ್ಷ ನವೀನ್ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್, ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಕಾಪು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಚಿತ್ರನಟ ಜೆಪಿ ತೂಮಿನಾಡ್, ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಎಚ್‌ಪಿಆರ್ ಸಮೂಹ ಸಂಸ್ಥಗಳ ನಿರ್ದೇಶಕ ಹರಿಪ್ರಸಾದ್ ರೈ, ಪಟ್ಲ ಫೌಂಡೇಷನ್ ಪಟ್ಲ ಸತೀಶ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಕಾಂಗ್ರೆಸ್ ಪ್ರಮುಖರಾದ ಇನಾಯತ್ ಆಲಿ, ಪ್ರಸಾದ್‌ರಾಜ್ ಕಾಂಚನ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ಜೆ.ಶೆಟ್ಟಿ, ಸಂತೋಷ್ ಕುಲಾಲ್, ಕಿಶನ್ ಹೆಗ್ಡೆ ಕೊಳಕೆಬೈಲು, ಶಿವಾಜಿ ಸುವರ್ಣ ಬೆಳ್ಳೆ, ಸುನೀಲ್ ಡಿ ಬಂಗೇರಾ, ಮಹಮ್ಮದ್ ನಿಯಾಜ್ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಎನ್.ಕೋಟ್ಯಾನ್ ವಂದಿಸಿದರು. ಮಧುರಾಜ್ ನಿರೂಪಿಸಿದರು.