ಮಾನ್ವಿ ತಾಲೂಕಿನ ಗೋರಕಲ್ ಗ್ರಾಮದ ಉನ್ನತೀಕರಿಸಿದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಯೋಗ ಶಿಬಿರ ನಡೆಸಲಾಯಿತು. 
ಜಿಲ್ಲೆ

ಯೋಗದಿಂದ ಬೌದ್ಧಿಕ ಮಟ್ಟ ಹೆಚ್ಚಳ

ರುದ್ರಪ್ಪ ವಾಲಿ

ಮಾನ್ವಿ: ತಾಲೂಕಿನ ಗೋರಕಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ದಶಮಾನೋತ್ಸವ ಸಂಭ್ರಮ ಅಂಗವಾಗಿ ಶಿಕ್ಷಣ ಇಲಾಖೆ ಹಾಗೂ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್‌ವತಿಯಿಂದ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಯೋಗ ಗುರು ಅನ್ನದಾನಯ್ಯಸ್ವಾಮಿ ಮಾತನಾಡಿ, ಪ್ರತಿನಿತ್ಯ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವುದರಿಂದ ಬೌದ್ಧಿಕ ಮಟ್ಟ ಹಾಗೂ ಏಕಾಗ್ರತೆ ಹೆಚ್ಚುತ್ತದೆ, ನೆನಪಿನ ಶಕ್ತಿ ಬೆಳೆಯುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ವೃಕ್ಷಾಸನ, ಪಾದಹಸ್ತಾಸನ, ಚಕ್ರಾಸನ, ಶಶಾಂಕಸನ, ಮುದ್ರೆಗಳನ್ನು ಅಭ್ಯಾಸ ಮಾಡಿಸಲಾಯಿತು.

ಶಾಲೆ ಮುಖ್ಯಶಿಕ್ಷಕ ರಮೇಶ, ಶಿಕ್ಷಕರಾದ ಜ್ಯೋತಿ ಪಾಟೀಲ್, ಶಾರದಾ, ಅನಿತಾ, ಪೂಜಾ ಪಾಟೀಲ್, ಮಂಜುನಾಥ, ಗುರುಬಸವ ಇನ್ನಿತರರು ಇದ್ದರು.