ಹಟ್ಟಿಚಿನ್ನದಗಣಿ ಕಂಪನಿಯ ದಾರುವಾಲಾ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಕ್ರೀಡಾಕೂಟವನ್ನು ಗಣಿ ಕಂಪನಿ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಸುರೇಶ್ ಆರ್.ಸಿ ಉದ್ಘಾಟಿಸಿದರು. ಪ್ರಮುಖರಾದ ಜಗನ್ ಮೋಹನ್, ಬಸವರಾಜ್ ಕರಡಿ, ಬಸಮ್ಮ ಯಾದವ್, ಶಂಕರಪ್ಪ ಸಕ್ರಿ, ಶೀಲಾಬಾಯಿ, ಚನ್ನಪ್ಪ ರಾಠೋಡ್, ಮುತ್ತಪ್ಪ, ಹೆಚ್.ಕೆ ಲಿಂಗಯ್ಯ, ರಾಯಪ್ಪ ಬಳಗಾನೂರು ಇದ್ದರು. 
ಜಿಲ್ಲೆ

ಜಾಲತಾಣಗಳಿಂದ ಕ್ರೀಡಾಸಕ್ತಿ ಕುಂಠಿತ

ಹಟ್ಟಿಚಿನ್ನದಗಣಿ: ಭಾರತ ಜನಸಂಖ್ಯೆ ಪ್ರಪಂಚದಲ್ಲೇ ಮೊದಲ ಸ್ಥಾನಕ್ಕೆ ತಲುಪುತ್ತಿದೆ, ಆದರೆ ಕ್ರೀಡಾಪಟುಗಳ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಹಟ್ಟಿ ವಲಯದ ಶಿಕ್ಷಣ ಸಂಯೋಜಕ ಬಸವರಾಜ್ ಕರಡಿ ಕಳವಳ ವ್ಯಕ್ತಪಡಿಸಿದರು.

ಹಟ್ಟಿಚಿನ್ನದಗಣಿ ಕಂಪನಿಯ ದಾರುವಾಲಾ ಕ್ರೀಡಾಂಗಣದಲ್ಲಿ ಗುರುಗುಂಟಾ, ಗೌಡೂರು, ವೀರಾಪೂರ ವಲಯ ಮಟ್ಟದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಬುಧವಾರ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ದೈಹಿಕ ಕಸರತ್ತು ಕಡಿಮೆಯಾಗುತ್ತಿದೆ. ಆಧುನಿಕ ಆಹಾರ ಪದ್ಧತಿ, ಸಾಮಾಜಿಕ ಜಾಲತಾಣಗಳ ಹಾವಳಿ ವಿದ್ಯಾರ್ಥಿಗಳು-ಮತ್ತು ಯುವಪಡೆಯನ್ನು ಕುಗ್ಗಿಸುತ್ತಿದೆ. 6ನೇ ತರಗತಿಯಿಂದ ಇಲಾಖೆ ದೈಹಿಕ ಶಿಕ್ಷಣವನ್ನು ಪಠ್ಯ ವಿಷಯವನ್ನಾಗಿ ಮಾಡಿದ್ದು, ವಿಷಯದಷ್ಟೇ ದೈಹಿಕ ಶಿಕ್ಷಣಕ್ಕೂ ಪ್ರಾಶಸ್ತ್ಯ ಕೊಟ್ಟು ಅಭ್ಯಾಸ ಮಾಡಬೇಕು ಎಂದರು.