ತಾವರಗೇರಾದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರಿಂದ ಮಣಿದೀಪ ಪೂಜೆ ಶುಕ್ರವಾರ ನೇರವೇರಿತು. ಪ್ರಮುಖರಾದ ವಾಸವಿ, ಗೀತಾ, ಪದ್ಮಾ, ಜ್ಯೋತಿ, ಸಹನಾ ಇದ್ದರು. 
ಜಿಲ್ಲೆ

ಸುಮಂಗಲೆಯರಿಂದ ಮಣಿದೀಪ ಪೂಜೆ

Gangavati - Desk - Veeresh S Ullagaddi

ತಾವರಗೇರಾ: ಪಟ್ಟಣದ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರಿಂದ ಅಧಿಕ ಮಾಸದ ಪ್ರಯುಕ್ತ ಮಣಿದೀಪ ಪೂಜೆ ಶುಕ್ರವಾರ ನೆರವೇರಿತು.

51 ಸುಮಂಗಲೆಯರು ಪೂಜಾ ವಿಧಿಯಲ್ಲಿ ತೊಡಗಿಕೊಂಡಿದ್ದರು. 33 ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಏಕಕಾಲದಲ್ಲಿ ಮಂತ್ರಗಳನ್ನು ಪಠಿಸುತ್ತಾ ಮೂರು ಗಂಟೆಗಳ ಪೂಜೆ ನೆರವೇರಿಸಿದರು. ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ವಾಸವಿ ತೆಮ್ಮಿನಾಳ, ಉಪಾಧ್ಯಕ್ಷೆ ಗೀತಾ ಕ್ಯಾಡೇದ, ಪ್ರಧಾನ ಕಾರ್ಯದರ್ಶಿ ಸಹನಾ ಶ್ಯಾಮಸುಂದರ ದರೋಜಿ, ಕಾರ್ಯದರ್ಶಿ ಜ್ಯೋತಿ ಶಿಡ್ಲಬಾವಿ, ಕಾರ್ಯಕಾರಿ ಸಮೀತಿಯ ವಾಸವಿ ಕಂದಗಲ್, ಗೀತಾ ಯಾಡಕಿ, ಪದ್ಮಾ ಹಂಚಿನಾಳ ಇತರರಿದ್ದರು.