ಜಿಲ್ಲೆ

ಪುತ್ತಿಲ ಪರಿವಾರದಿಂದ ಉಚಿತ ವೈದ್ಯಕೀಯ ಶಿಬಿರ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಟ್ರಸ್ಟ್‌ನ ಇರ್ದೆ, ಬೆಟ್ಟಂಪಾಡಿ, ಪಾಣಾಜೆ ಮತ್ತು ನಿಡ್ಪಳ್ಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ, ಆಂಬುಲೆನ್ಸ್ ಸೇವೆಯ 2ನೇ ವರ್ಷದ ಪದಾರ್ಪಣೆಯ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಅಟಲ್‌ಜೀ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ಬಿಜೆಪಿ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಬೆಟ್ಟಂಪಾಡಿ ಗ್ರಾಪಂ ಸಭಾಭವನದಲ್ಲಿ ನಡೆಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಉದ್ಘಾಟಿಸಿದರು. ಬಿಜೆಪಿ ಬೆಟ್ಟಂಪಾಡಿ ಶಕ್ತಿ ಕೇಂದ್ರದ ಸಂಚಾಲಕ ಸಂದೀಪ್ ರೈ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್, ಡಾ.ಸತೀಶ್‌ಕುಮಾರ್ ಬಿ., ನಿಡ್ಪಳ್ಳಿ ಶಕ್ತಿ ಕೇಂದ್ರದ ಸಂಚಾಲಕ ಸಂತೋಷ್‌ಕುಮಾರ್ ಬಿ., ಪಾಣಾಜೆ ಶಕ್ತಿ ಕೇಂದ್ರದ ಸಂಚಾಲಕ ಪ್ರೇಮ್‌ರಾಜ್, ಇರ್ದೆ ಶಕ್ತಿ ಕೇಂದ್ರದ ಪುರಂದರ ಡಿ., ಎಸ್‌ಸಿ ಮೋರ್ಚಾದ ಸುಜಿತ್ ಕಜೆ ಅತಿಥಿಗಳಾಗಿದ್ದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಡ್ಪಳ್ಳಿ ಘಟಕದ ಅಧ್ಯಕ್ಷ ಕುಮಾರ ನರಸಿಂಹ ಭಟ್ ಸ್ವಾಗತಿಸಿದರು. ಯತೀಶ್ ಕೋರ್ಮಂಡ ವಂದಿಸಿದರು. ಉಚಿತ ವೈದ್ಯಕೀಯ ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳ ಜತೆಗೆ ದಂತ ಹಾಗೂ ಕಣ್ಣಿನ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. 364 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.

ಪಕ್ಷದ ಹಿರಿಯ ಕಾರ್ಯಕರ್ತರಾದ ಬಿ.ವೆಂಕಟ್ರಾವ್ ಬೆಟ್ಟಂಪಾಡಿ, ಸಂಜೀವ ಶೆಟ್ಟಿ ಕೊಮ್ಮಂಡ, ನಾರಾಯಣ ಭಟ್ ಕಾಕೆಕೊಚ್ಚಿ, ಸೋಮಪ್ಪ ನಾಯ್ಕ ಬಾಜಗುಳಿ, ಸುಬ್ಬಣ್ಣ ಗೌಡ ಪಾರ, ಶ್ರೀನಿವಾಸ ಭಟ್ ವಾಲ್ತಾಜೆ, ಪರಮೇಶ್ವರ ನಾಯ್ಕ, ಗುರುವ ಗೋಳಿಪದವು ಅವರನ್ನು ಗೌರವಿಸಲಾಯಿತು. ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಭರಣ್ಯ, ಪ್ರೇಮ್‌ರಾಜ್ ಆರ್ಲಪದವು, ರಕ್ಷಣ್ ಕುಲಾಲ್ ಬೇಂಗತ್ತಡ್ಕ, ಸುಖಿನ್‌ರಾಜ್, ಸುಜಿತ್ ಕಜೆ, ಚರಣ್ ಕಕ್ಕೂರು, ಜಗದೀಶ್ ಆರ್ಲಪದವು ಅವರನ್ನು ಸನ್ಮಾನಿಸಲಾಯಿತು.