ಜಿಲ್ಲೆ

ಉಳೆಪಾಡಿಯಲ್ಲಿ ಉಚಿತ ಸಾಮೂಹಿಕ ವಿವಾಹ

ಸೌಮ್ಯ ಆರ್

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಉಚಿತ ಸಾಮೂಹಿಕ ವಿವಾಹವು ಪ್ರತಿಷ್ಠಾಪನಾ ವರ್ಧಂತಿ ಹಾಗೂ ವೈಶಿಷ್ಟೃಪೂರ್ಣ ಶತಚಂಡಿಕಾಯಾಗದೊಂದಿಗೆ ಸಂಪನ್ನಗೊಂಡಿತು.

ನಾಲ್ಕು ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು. ಜೋತಿಷಿ ರಮಾನಾಥ ಭಟ್ ಮೂಲ್ಕಿ, ರಾಮದಾಸ ಭಟ್ ಉಡುಪಿ, ಅರುಣ ಕೆ.ಪೈ ಸುರತ್ಕಲ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ.ಕೃಷ್ಣ ಕುಮಾರ್ ಶೆಟ್ಟಿ ಬಳ್ಕುಂಜೆ, ಡಾ.ಎನ್.ವಿ.ಶೆಟ್ಟಿ ಬೆಂಗಳೂರು, ಸುಧಾಕರ ಕಿನ್ನಿಗೋಳಿ, ಚೇತನಾ ಮೋಹನ್‌ದಾಸ್, ನಾರಾಯಣ ಶೆಟ್ಟಿ ಉಳೆಪಾಡಿ ಮೊದಲಾದವರಿದ್ದರು.

ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿದರು. ರಾಜೇಶ ಶೆಟ್ಟಿ ಪುಲ್ಲೋಡಿ ವಂದಿಸಿದರು. ಚೇತನಾ ಮೋಹನ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು. ಆಶಾ ಕೀರ್ತಿ ಶೆಟ್ಟಿ ಹಾಗೂ ರಾಧಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.