ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಮರವಂತೆ ಸರ್ಕಾರಿ ಆಸ್ಪತ್ರೆ ವಠಾರದಲ್ಲಿ ನಡೆಯಿತು. ನರಸಿಂಹ ದೇವಾಡಿಗ, ಲೋಕೇಶ್ ಖಾರ್ವಿ ಮೊದಲಾದವರಿದ್ದರು 
ಜಿಲ್ಲೆ

ಮರವಂತೆಯಲ್ಲಿ ಉಚಿತ ಕನ್ನಡಕ ವಿತರಣೆ

ಇಂದಿರಾ ಎನ್ ಕೆ

ಗಂಗೊಳ್ಳಿ: ನಾವುಂದ ಲಯನ್ಸ್ ಕ್ಲಬ್ ಮತ್ತು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಶ್ರಯದಲ್ಲಿ ಕನ್ನಡಕ ಉಚಿತ ವಿತರಣಾ ಕಾರ್ಯಕ್ರಮ ಮರವಂತೆ ಸರ್ಕಾರಿ ಆಸ್ಪತ್ರೆ ವಠಾರದಲ್ಲಿ ಇತ್ತೀಚೆಗೆ ನಡೆಯಿತು. ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು. ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಮರ ಶೆಟ್ಟಿ, ಗುರುರಾಜ ಶೇಟ್, ಭಾಸ್ಕರ್ ಶೆಟ್ಟಿ, ಡಾ.ಗಣೇಶ್ ಭಟ್, ಮುದ್ದುಮನೆ ಆಸ್ಪತ್ರೆಯ ಶಂಕರ ಶೆಟ್ಟಿ ಉಪಸ್ಥಿತರರಿದ್ದರು. ರಾಜು ದೇವಾಡಿಗ ಸ್ವಾಗತಿಸಿ, ವಂದಿಸಿದರು.