ಮನ್ವಿಯಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯಿಂದ ಆಯೋಜಿಸಿದ್ದ ಆರೋಗ್ಯದ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಶಾಸಕ ಹಂಪಯ್ಯ ನಾಯಕ ಉದ್ಘಾಟಿಸಿದರು. ಕಮಿಟಿ ತಾಲೂಕು ಅಧ್ಯಕ್ಷ ಸೈಯದ್ ಆರೀಫ್ ಖಾದ್ರಿ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್ ಸಾಬ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ, ಪುರಸಭೆ ಮಾಜಿ ಅಧ್ಯಕ್ಷ ನಜೀರುದ್ದೀನ್ ಖಾದ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ ಪಾಟೀಲ್ ಇದ್ದರು. 
ಜಿಲ್ಲೆ

ಉಚಿತ ಶಿಬಿರಗಳಿಂದ ಬಡವರಿಗೆ ಅನುಕೂಲ

Kopala - Desk - Eraveni

ಮಾನ್ವಿ: ಬಡ ರೋಗಿಗಳ ಅನುಕೂಲಕ್ಕಾಗಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯಿಂದ ಆರೋಗ್ಯದ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಪಟ್ಟಣದಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯಿಂದ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯದ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಪರೀಕ್ಷೆಗೆ ಸಾಕಷ್ಟ ಹಣ ನೀಡಬೇಕಾಗುತ್ತದೆ.

ಉಚಿತ ಶಿಬಿರಗಳಿಂದ ಬಡವರಿಗೆ ಸಹಾಯವಾಗಲಿದೆ ಎಂದರು. ಪ್ರಮುಖರಾದ ಸಮದಾನಿ ನಾಯ್ಕ, ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲಿದ್ ಖಾದ್ರಿ, ಸೈಯದ್ ಮುದುಗಲ್ ಮಾಸ್ಟರ್, ಅಲ್ ಅಹಮ್, ಮಹಮ್ಮದ್ ಇಲಿಯಾಸ್, ಸೈಯದ್ ಜಾವಿದ್ ಆಸ್ಮಿ, ಮುಸ್ತಫಾ ಬಾಗಲಕೋಟೆ ಇದ್ದರು.