ಬಂಟ್ವಾಳ: ಪೊಳಲಿಯಿಂದ ಅಡ್ಡೂರಿನವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಬಸ್ ವ್ಯವಸ್ಥೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ವೈಯಕ್ತಿಕ ನೆಲೆಯಲ್ಲಿ ಮಾಡಿದ್ದು, ಬಸ್ ಓಡಾಟಕ್ಕೆ ಶುಕ್ರವಾರ ಬೆಳಗ್ಗೆ ಪೊಳಲಿಯಲ್ಲಿ ಚಾಲನೆ ನೀಡಲಾಯಿತು.
ಅಡ್ಡೂರು ಸೇತುವೆಯಲ್ಲಿ ಬಸ್ ಸಂಚಾರ ನಿಷೇಧಿಸಿರುವುದರಿಂದ, ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಜನರ ಸದುಪಯೋಗಕ್ಕಾಗಿ ಉಚಿತ ಬಸ್ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಕ್ ಮಾಡಿದ್ದಾರೆ.
ಪೊಳಲಿ ಶ್ರೀ ದೇವಿಯ ಭಕ್ತರು ಹಾಗೂ ಊರ ಜನರ ಸದುಪಯೋಗಕ್ಕಾಗಿ ಪೊಳಲಿಯಿಂದ ಅಡ್ಡೂರು ತನಕ ಸೇತುವೆ ದುರಸ್ತಿಯಾಗುವವರೆಗೆ ಉಚಿತ ವಾಹನದ ವ್ಯವಸ್ಥೆ ಜನರಿಗೆ ಪ್ರಯೋಜನವಾಗಲಿದೆ. ಬೆಳಗ್ಗೆ 6ರಿಂದ ರಾತ್ರಿ 7ರವರೆಗೆ ಬಸ್ ನಿರಂತರ ಓಡಾಟ ಮಾಡಲಿದೆ.
ವೆಂಕಟೇಶ್ ನಾವುಡ, ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಚಂದ್ರಹಾಸ ಪಳ್ಳಿಪಾಡಿ, ಲೋಕೇಶ್, ಭರಣಿ, ಯಶವಂತ್ ಕೊಟ್ಯಾನ್ ಪೊಳಲಿ, ಸುಬ್ಬಯ್ಯ ನಾಯ್ಕ, ಕುಮಾರ್ ಪೊಳಲಿ, ಯಶೋಧರ ಪೊಳಲಿ, ಸಚಿನ್ ಅಡಪ, ಹರೀಶ್ ಬಳ್ಳಿ ಗುರುಪುರ, ಅಶೋಕ್ ಬಡಕಬೈಲ್, ಸುರೇಶ್, ಸಂದೀಪ್ ಪೊಳಲಿ, ಕಾರ್ತಿಕ್ ಬಳ್ಲಾಲ್, ಸಂತೋಷ್ ಮಣಿಕಂಠ, ಜಯಶ್ರೀ ಕಲ್ಲಕೇರ ಮೇರಮಜಲ್, ಚಂದ್ರವತಿ ಪೊಳಲಿ ಭಾಗವಹಿಸಿದರು.