ಉಡುಪಿ: ಅಪರಿಚಿತ ವ್ಯಕ್ತಿಗಳು ಸ್ಟಾಕ್ ಮಾರ್ಕೆಟ್ ನೇವಿಗೇಶನ್ ಎಂಬ ವಾಟ್ಸಾೃಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿ, ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿ, ಹೂಡಿಕೆಗೆ ಪ್ರಚೋಧಿಸಿ 49 ಲಕ್ಷ ರೂ. ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಬೆಳ್ಳೆಯ ಫ್ರಾನ್ಸಿಸ್ ಕಾಸ್ತಲಿನೋ (72) ವಂಚನೆಗೊಳಗಾದವರು. ಇವರು ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗೆ ಡಿ.30ರಂದು 17 ಲಕ್ಷ ರೂ., ಹೆಂಡತಿ ಖಾತೆಯಿಂದ 10.50 ಲಕ್ಷ ರೂ., ಮಗನ ಖಾತೆಯಿಂದ 21.50 ಲಕ್ಷ ರೂ. ಹಣವನ್ನು ವರ್ಗಾವಣೆ ವಾಡಿದ್ದಾರೆ. ಬಳಿಕ ಹೂಡಿಕೆ ವಾಡಿದ ಹಣವನ್ನು ವಾಪಸ್ ತೆಗೆಯಲು ಪ್ರಯತ್ನಿಸಿದಾಗ ಮತ್ತೆ ಹಣ ಹೂಡಿಕೆ ವಾಡುವಂತೆ ಒತ್ತಾಯ ವಾಡುತ್ತಿದ್ದು, ಹೂಡಿಕೆ ವಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ನೀಡದೆ ನಷ್ಟ ಉಂಟು ವಾಡಿರುವ ಬಗ್ಗೆ ದೂರು ದಾಖಲಾಗಿದೆ.