ಕಾಸರಗೋಡು: ಆನ್‌ಲೈನ್ ವ್ಯಾಪಾರದ ಹೆಸರಲ್ಲಿ 19.85ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಧೂರು ಸನಿಹದ ಅಲ್ತಾಫ್ ಮಹಲ್ ನಿವಾಸಿ ಅಬೂಬಕ್ಕರ್ ಅನಸ್ ಎಂಬವರ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ವಾಟ್ಸಾೃಪ್, ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಆನ್‌ಲೈನ್ ವಂಚಕರು ಆನ್‌ಲೈನ್ ಕ್ರಿಪ್ಟೋ ಟ್ರೇಡಿಂಗ್ ಮಾರ್ಕೆಟಿಂಗ್ ವ್ಯವಸ್ಥೆ ಮೂಲಕ ಭಾರಿ ಲಾಭ ಗಿಟ್ಟಿಸಿಕೊಡುವ ಭರವಸೆಯೊಂದಿಗೆ 19,85,232ರೂ. ಪಡೆದು ನಂತರ ಲಾಭಾಂಶವಾಗಲಿ, ಪಡೆದ ಹಣವನ್ನಾಗಲಿ ವಾಪಾಸುಮಾಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.