ಜಿಲ್ಲೆ

ಬ್ಯಾಂಕ್ ಖಾತೆಯಿಂದ 5.17 ಲಕ್ಷ ರೂ. ವಂಚನೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಮೀರಾ ಎಂಬುವರು ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಪ್ರದೀಪ ಎಂಬುವರ ಬ್ಯಾಂಕ್ ಖಾತೆಯಿಂದ 5.17 ಲಕ್ಷ ರೂ.ಗಳನ್ನು ಅವರ 7 ಬೇರೆ ಬೇರೆ ಖಾತೆಗಳಿಗೆ ಜಮಾವಣೆ ಮಾಡಿಕೊಂಡು ಪ್ರೈವೇಟ್ ಇಕ್ವಿಟಿ ಅಕೌಂಟ್‌ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ, ಪ್ರದೀಪ್ ಅವರ ಅಸಲು ಮೊತ್ತ ಹಾಗೂ ಯಾವುದೇ ಲಾಭಾಂಶ ನೀಡದೇ ವಂಚನೆ ಮಾಡಿದ್ದಾರೆ ಎಂದು ಪ್ರದೀಪ್ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.