ಜಿಲ್ಲೆ

ವಿವಾಹ ಭರವಸೆ ನೀಡಿ ವಂಚನೆ

ಸೌಮ್ಯ ಆರ್

ಕಾಸರಗೋಡು: ವಿವಾಹ ಭರವಸೆ ನೀಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗದ ನೇತ್ರ ಚಿಕಿತ್ಸಾಲಯವೊಂದರ ನೌಕರ, ಕಣ್ಣೂರು ನಿವಾಸಿ ನಿಜಾರ್(30) ಎಂಬಾತನನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡಿನ ಸರ್ಕಾರಿ ಆಸ್ಪತ್ರೆಗೆ ಸಹೋದರನೊಂದಿಗೆ ಆಗಮಿಸಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಪರಸ್ಪರ ಪೀತಿಸಲಾರಂಭಿಸಿದ್ದರು. ವಿವಾಹದ ಭರವಸೆ ನೀಡಿ ವಿವಿಧೆಡೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ನಂತರ ವಿವಾಹಕ್ಕೆ ಹಿಂದೇಟು ಹಾಕಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.