ಜಿಲ್ಲೆ

ನಡುರಸ್ತೆಯಲ್ಲೇ ಹೆಣವಾದ ಕುರಿಗಳು; 14 ಕುರಿಗಳು ಸ್ಥಳದಲ್ಲೇ ಸಾವು..

ವಿಜಯನಗರ: ನಡುರಸ್ತೆಯಲ್ಲೇ ಕುರಿಗಳು ಸಾಮೂಹಿಕವಾಗಿ ಸಾವಿಗೀಡಾಗಿದ್ದು, ಒಟ್ಟಿಗೇ 14 ಕುರಿಗಳು ಮೃತಪಟ್ಟಿವೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ವರಕನಹಳ್ಳಿ ಗ್ರಾಮದಲ್ಲಿ ಈ ಸರಣಿ ಸಾವು ಸಂಭವಿಸಿದೆ.

ಪೂರ್ಯನಾಯ್ಕ್ ಎಂಬವರಿಗೆ ಈ ಕುರಿಗಳು ಸೇರಿದ್ದು, ಅವುಗಳನ್ನು ಕರೆದೊಯ್ಯುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಪ್ರಾಣಕ್ಕೇ ಮುಳುವಾಗಿದೆ. ಇಟ್ಟಿಗೆ ತುಂಬಿದ ಲಾರಿ ಈ ಕುರಿಮಂದೆ ಮೇಲೆ ಸಾಗಿದ್ದು, ರಸ್ತೆ ತುಂಬೆಲ್ಲ ಕುರಿಗಳು ಸತ್ತು ಬಿದ್ದಿವೆ.

ಚಾಲಕ ಅಜಾಗರೂಕತೆಯಿಂದ ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ. ಘಟನಾ ಸ್ಥಳಕ್ಕೆ ಇಟ್ಟಗಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.