ಮೈಸೂರು: ಪ್ಯಾಕೇಜ್ ಟೂರ್ ಮೂಲಕ ಕುಲು-ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರು ಮೂಲದ ನಾಲ್ವರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ಕಾಣೆಯಾಗಿರುವವರು ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ಎಂದು ತಿಳಿದು ಬಂದಿದೆ. ಪ್ಯಾಕೇಜ್ ಟೂರ್ ಮೂಲಕ ಕುಲು, ಮನಾಲಿ ಪ್ರವಾಸಕ್ಕೆಂದು ಕಳೆದ ಗುರುವಾರ ಮೈಸೂರಿನಿಂದ ಹೊರಟಿದ್ದರು.
ಪ್ರವಾಸಕ್ಕೆ ತೆರಳಿದ ಮೇಲೆ ಭಾನುವಾರ ಕೊನೆಯ ಬಾರಿ ಕುಟುಂಬಸ್ಥರ ಸಂಪರ್ಕಕಕ್ಕೆ ಸಿಕ್ಕಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ನಾವು ಕೊಠಡಿಯ್ಲೇ ಇದ್ದೇವೆ ಎಂದು ಕರೆ ಮಾಡಿದಾಗ ತಿಳಿಸಿದ್ದರು.
ಅದಾದ ಬಳಿಕ ಇದುವರೆಗೂ ಯಾರ ಬಗ್ಗೆಯೂ ಮಾಹಿತಿ ದೊರೆತ್ತಿಲ್ಲ. ಈ ಕುರಿತು ಕುಟುಂಬಸ್ಥರು ಆತಂಕಗೊಂಡಿದ್ದು, ಪ್ರವಾಸಕ್ಕೆಂದು ತೆರಳಿದವರು ಕ್ಷೇಮವಾಗಿ ವಾಪಸ್ ಬರಲೆಂದು ಕುಟುಂಬಸ್ಥರು ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ.