ಧಾರವಾಡ: ರಾಯಚೂರು ಕಾಲೇಜೊಂದರ ನಾಲ್ವರು ವಿದ್ಯಾರ್ಥಿನಿಯರು ಮೊನ್ನೆ ನಾಪತ್ತೆಯಾಗಿದ್ದು, ಆ ಪೈಕಿ ಇಂದು ಇಬ್ಬರು ಪತ್ತೆಯಾಗಿದ್ದು, ಕಾಣೆಯಾಗಿರುವ ಇನ್ನಿಬ್ಬರ ಸುಳಿವು ಇನ್ನೂ ಸಿಕ್ಕಿಲ್ಲ.
ರಾಯಚೂರಿನ ಪದವಿಪೂರ್ವ ಕಾಲೇಜೊಂದರ ನಾಲ್ವರು ವಿದ್ಯಾರ್ಥಿನಿಯರು ಜುಲೈ 23ರಂದು ಕಾಣೆಯಾಗಿದ್ದರು. ಈ ಕುರಿತು ಪೊಲೀಸ್ ಪ್ರಕರಣ ದಾಖಲಾಗಿತ್ತು. ಆ ಪೈಕಿ ಇಬ್ಬರು ಇಂದು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಸದ್ಯ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಯ ವಶದಲ್ಲಿ ಅವರಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕಾಣೆಯಾಗಿರುವ ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಲ್ವರೂ ಗೋವಾಗೆ ತೆರಳಿರಬಹುದೆಂಬ ಶಂಕೆಯಲ್ಲಿರುವ ಪೊಲೀಸರು, ಇವರಷ್ಟೇ ಹೋಗಿದ್ದರಾ ಅಥವಾ ಯಾರಾದರೂ ಇವರನ್ನ ಕರೆದೊಯ್ದಿದ್ದರಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.