ಜಿಲ್ಲೆ

ತುಳುನಾಡು ಪರಶುರಾಮ ಸೃಷ್ಟಿಯ ಸ್ವರ್ಗ : ಎಸ್.ಪ್ರದೀಪ್ ಕುಮಾರ್ ಕಲ್ಕೂರ ಬಣ್ಣನೆ

ಸೌಮ್ಯ ಆರ್

ಮುಳ್ಳೇರಿಯ: ತುಳುನಾಡು ಪರಶುರಾಮ ಸೃಷ್ಟಿಯ ಸ್ವರ್ಗ. ಪ್ರಕೃತಿಯ ವಿಸ್ಮಯಗಳು ಒಂದೊಂದು ಕಡೆ ಒಂದೊಂದು ರೀತಿ. ಅದರಲ್ಲೂ ಇಲ್ಲಿನ ಮಹಾಲಿಂಗೇಶ್ವರನ ಸನ್ನಿಧಿಯ ಕಾವೇರಿ ತೀರ್ಥ ನಮಗೆ ಪುಣ್ಯ ಕೊಡುತ್ತದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಮಂಗಳವಾರ ನಡೆದ ಪ್ರತಿಷ್ಠಾಪನಾ ದಿನ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಂತ್ರಿ ವಾಸುದೇವ ತಂತ್ರಿ ಕುಂಟಾರು ದೀಪ ಬೆಳಗಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ರಾಮ್ ಪ್ರಸಾದ್ ಶೆಟ್ಟಿ, ಕ್ಷೇತ್ರದ ಕಾರ್ಯಾಧ್ಯಕ್ಷ ದಾಮೋದರ ಮಣಿಯಾಣಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುಕೇಶ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ರಾಘವ ಎಂ.ಎನ್, ನಾರಾಯಣ ಕೇಕಡ್ಕ, ಚಂದ್ರಶೇಖರ ಎಂ.ಎನ್, ರಾಮಚಂದ್ರ ಎನ್, ಮನೋಜ್ ಎಂ.ಸಿ, ಸದಾನಂದ, ಸೇವಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.