ಜಿಲ್ಲೆ

ಮಾಜಿ ಸಚಿವರ ಸಿಡಿ ಪ್ರಕರಣ: 45ಕ್ಕೂ ಹೆಚ್ಚು ಪಿಜಿಗಳಲ್ಲಿ ಹುಡುಕಿದ್ರು ಸಿಗದ ಸಂತ್ರಸ್ತೆ ಸುಳಿವು

ಬೆಂಗಳೂರು: ಮಾಜಿ ಸಚಿವರ ಸೆಕ್ಸ್​ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎಂದು ಹೇಳಲಾಗಿರುವ ಯುವತಿಗಾಗಿ ಖಾಕಿ ಪಡೆ ತೀವ್ರ ತಲಾಶ್​ ನಡೆಸುತ್ತಿದೆ.

ಈಗಾಗಲೇ ಬೆಂಗಳೂರಿನ 45ಕ್ಕೂ ಹೆಚ್ಚು ಪಿಜಿಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರ್​.ಟಿ. ನಗರದಲ್ಲಿರುವ ಪ್ರತಿಯೊಂದು ಪಿಜಿಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಯುವತಿಯ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ.

ಇಷ್ಟೇ ಅಲ್ಲದೆ, ಯುವತಿಯ ಟವರ್ ಲೊಕೇಷನ್ ಆಧಾರದ ಮೇಲೆ ಶೋಧಕಾರ್ಯ ನಡೆಯುತ್ತಿದೆ. ಯುವತಿ ಎಲ್ಲೆಲ್ಲಿ ಓಡಾಡಿದ್ದಾಳೋ ಅಲ್ಲೆಲ್ಲ ಖಾಕಿ ಪಡೆ ಪರಿಶೀಲನೆ ಮಾಡುತ್ತಿದೆ. ಸಿಸಿಬಿ ಪೊಲೀಸರು ಈಗಾಗಲೇ ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ. ಆಕೆಯ ಕಾಲ್ ಡಿಟೇಲ್ಸ್, ಆಕೆ ಯಾರೊಂದಿಗೆ ಸಂಪರ್ಕದಲ್ಲಿದ್ದಳು? ಯಾರೊಡನೆ ಮಾತುಕತೆ ನಡೆಸಿದ್ದಳು? ಎಲ್ಲದರ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಯುವತಿಯ ಕುಟುಂಬಸ್ಥರ ಮೇಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರಕರಣದಲ್ಲಿ ಯುವತಿಯ ಹೇಳಿಕೆಯೇ ಮುಖ್ಯ ಆಗಿರುವುದರಿಂದ ಆಕೆಗಾಗಿ ಪೊಲೀಸರು ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)