ಜಿಲ್ಲೆ

ಲಂಡನ್ ಬಸವೇಶ್ವರ ಮೂರ್ತಿಗೆ ಬೊಮ್ಮಾಯಿ ನಮನ

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಲಂಡನ್‌ನ ಥೇಮ್ಸ್ ನದಿ ದಂಡೆಯ ಮೇಲೆ ಸ್ಥಾಪಿಸಿರುವ ಬಸವೇಶ್ವರ ಮೂರ್ತಿಗೆ ನಮನ ಸಲ್ಲಿಸಿದರು.

ಲಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್‌ನ ಬಸವ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು. ಕನ್ನಡ ಬಳಗ, ಕನ್ನಡಿಗರು ಯುಕೆ ಮತ್ತು ಭಾರತೀಯ ವಿದ್ಯಾ ಭವನದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಲಾಂಬೆತ್ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್, ಮಾಜಿ ಉಪಮೇಯರ್ ರಾಜೇಶ್ ಅಗರ್ವಾಲ್, ಬಸವ ಸಮಿತಿಯ ಪದಾಧಿಕಾರಿಗಳಾದ ಅಭಿಜಿತ್ ಸಾಲಿಯಂಥ್ ಮತ್ತು ರಂಗನಾಥ ಮಿರ್ಜಿ ಮಾಜಿ ಸಿಎಂ ಬೊಮ್ಮಾಯಿ ಅವರನ್ನು ಸ್ವಾಗತಿಸಿದರು.

ಲಾಂಬೆತ್ ಬಸವೇಶ್ವರ ಫೌಂಡೇಶನ್ ಲಂಡನ್ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ಮನವಿ ಪತ್ರವೊಂದನ್ನು ಬೊಮ್ಮಾಯಿಯವರಿಗೆ ನೀಡಿದ್ದು, ಪ್ರಧಾನಿಯವನ್ನು ಕರೆತರಲು ಮಧ್ಯಸ್ಥಿಕೆ ವಹಿಸಲು ವಿನಂತಿ ಮಾಡಲಾಯಿತು.

2015ರ ನವೆಂಬರ್ 14ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನಾವರಣಗೊಂಡ ಐತಿಹಾಸಿಕವಾದ ಈ ಮೂರ್ತಿ, ಯುಕೆ ಸ್ಟಾೃಚೂಸ್ ಆ್ಯಕ್ಟ್ 1854 ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್‌ನಲ್ಲಿ ಅನುಮತಿ ಪಡೆದ ಮೊದಲ ಸ್ಮಾರಕ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ 2023ರ ಮಾರ್ಚ್5 ರಂದು ಲಾರ್ಡ್ ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಿ ಗೌವರ ಸಲ್ಲಿಸಿದ್ದರು.