ಕಿನ್ನಿಗೋಳಿ: ಕೊಂಡೆಲ್ತಾಯ ದೈವದ ಸಂಧಿ ಬರೆಯುವಾಗ ಭಯವಿತ್ತು. ಆದರೆ ದೈವದ ಅಭಯದಿಂದ ಸಾಧ್ಯವಾಯಿತು ಎಂದು ಡಾ.ರತಿ ಶ್ರೀಧರ್ ಹೇಳಿದರು.
ಶ್ರೀ ಕೊಂಡೆಲ್ತಾಯ ದೈವಸ್ಥಾನದ ವಾರ್ಷಿಕ ನೇಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
1864ರಲ್ಲಿನ ಪುಸ್ತಕದಲ್ಲಿ ಇಲ್ಲಿನ ಕೊಂಡೆಲ್ತಾಯದ ಬಗ್ಗೆ ಉಲ್ಲೇಖ ಮತ್ತು ಶಶಿಕುಮಾರ್ ಬಲ್ಯಾಯ ಅವರ ಸಹಕಾರದಿಂದ ಸಂಧಿ ಬರೆದು ಪೂರ್ಣಗೊಳಿಸಿದೆ. ಹೆಚ್ಚಿನ ದೈವಾರಾಧನೆ ಪುಸ್ತಕದಲ್ಲಿರುವುದು ಮತ್ತು ನೇಮದಲ್ಲಿ ನಡೆಯುವುದು ಅಜಗಜಾಂತರವಿದೆ. ಯುವ ಜನತೆ ಇದನ್ನೇ ನಂಬುತ್ತಾರೆ. ನೇಮದ ಕಟ್ಟು ಕಟ್ಟಲೆಗಳು ಬದಲಾಗುತ್ತಿದ್ದು ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ಸಾಧಕರಾದ ಚಂದಯ್ಯ ಆಚಾರ್ಯ, ಗುರುಪ್ರಸಾದ್ ಭಟ್, ಗಣೇಶ್ ಎಸ್.ರಾವ್ ಶೇಡಿಗುರಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಎ.ಜಯರಾಮ ಶೆಟ್ಟಿ, ಈಶ್ವರ್ ಕಟೀಲ್, ತುಕಾರಾಮ್ ಎಕ್ಕಾರ್, ಚಂದ್ರಶೇಖರ ಬೆಳ್ಜಡ, ಕೊಡೆತ್ತೂರು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೊಡೆತ್ತೂರು ಉದ್ಯಮಿ ಕಿರಣ್ ಶೆಟ್ಟಿ, ಧನಂಜಯ ಶೆಟ್ಟಿಗಾರ್ ಸಾಗರಿಕಾ, ತಿಮ್ಮಪ್ಪ ಕೋಟ್ಯಾನ್ ಕಟೀಲು, ದೈವಸ್ಥಾನದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್ ಉಪಸ್ಥಿತರಿದ್ದರು. ಶಿಕ್ಷಕ ಸದಾಶಿವ ಸನ್ಮಾನ ಪತ್ರ ವಾಚಿಸಿದರು. ರಾಜೇಂದ್ರ ಎಕ್ಕಾರು ನಿರೂಪಿಸಿದರು.