ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಕ್ರೀಡಾಕೂಟದ ಸಂಘಟನಾ ಸಮಿತಿ ರಚನೆ ಸಭೆ ಕುರ್ಚಿಪಳ್ಳ ಜಿ.ಎಚ್.ಯು.ಪಿ. ಶಾಲೆಯಲ್ಲಿ ನಡೆಯಿತು.
ಮಂಗಲ್ಪಾಡಿ ಗ್ರಾಪಂ ಅಧ್ಯಕ್ಷೆ ರುಬೀನ ನೌಫಲ್ ಉದ್ಘಾಟಿಸಿದರು. ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಅಬ್ದುಲ್ ರಹ್ಮಾನ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಹನೀಫ್ ಪಿ.ಕೆ. ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ತಿರುಮಲೇಶ್ವರಿ ಸಂಘಟಕ ಸಮಿತಿಯ ಪ್ಯಾನಲ್ ಮಂಡಿಸಿದರು.
ಮುಖ್ಯಶಿಕ್ಷಕ ಉಮೇಶ್ ಬಜೆಟ್ ಮಂಡಿಸಿದರು. ವಾರ್ಡ್ ಸದಸ್ಯ ಮೊಹಮ್ಮದ್ ರಫೀಕ್, ಸಿ.ಡಿ.ಎಸ್ ಅಧ್ಯಕ್ಷೆ ಸುಶೀಲ, ಎಚ್.ಎಂ. ಫೋರಂ ಕನ್ವೀನರ್ ಶ್ಯಾಮ್ ಭಟ್, ಬ್ಲಾಕ್ ಸದಸ್ಯ ಅಶೋಕ್ ಮೊದಲಾದವರು ಶುಭ ಹಾರೈಸಿದರು. ಪಿಟಿಎ ಅಧ್ಯಕ್ಷ ಇಬ್ರಾಹಿಂ ಮೋಮಿನ್, ಪೈವಳಿಕೆ ನಗರ ಶಾಲೆಯ ಪ್ರಾಂಶುಪಾಲ ರಘುರಾಮ ಆಳ್ವ, ಪಿಟಿಎ ಉಪಾಧ್ಯಕ್ಷ ಸತೀಶ್, ಎಂಪಿಟಿಎ ಉಪಾಧ್ಯಕ್ಷೆ ಫಾತಿಮತ್ ಜೊಹ್ರಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೈರುನ್ನೀಸ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ತಾಹಿರ ಕಾರ್ಯಕ್ರಮ ನಿರೂಪಿಸಿದರು. ಮಖ್ಯಶಿಕ್ಷಕ ಉಮೇಶ್ ಸ್ವಾಗತಿಸಿದರು. ಧನ್ಯಾ ವಂದಿಸಿದರು.