ಬದಿಯಡ್ಕ: ಅರಣ್ಯ ಇಲಾಖೆ ಕಾಸರಗೋಡು, ಸಾಮಾಜಿಕ ಅರಣ್ಯೀಕರಣ ವಿಭಾಗ, ಎಡನೀರು ಸ್ವಾಮಿಜೀಸ್ ಹೈಯರ್ ಸೆಕೆಂಡರಿ ಶಾಲೆ ಫಾರೆಸ್ಟ್ರಿ ಕ್ಲಬ್-ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ರಾಣಿಪುರ ಪರಿಸರ ಪ್ರವಾಸೋದ್ಯಮ ಕೇಂದ್ರದಲ್ಲಿ ಕಾಡ್ಗಿಚ್ಚು ಜಾಗೃತಿ ತರಗತಿ ಹಾಗೂ ಅರಣ್ಯ ಅಧ್ಯಯನ ಪ್ರವಾಸ ನಡೆಸಲಾಯಿತು.
ಅರಣ್ಯ ಜೀವನ ನಿರ್ವಹಣೆಯಲ್ಲಿ ಜೀವವೈವಿಧ್ಯದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ರಾಣಿಪುರ ವನಯಾತ್ರೆ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿತು.
ಉಪವಲಯ ಅರಣ್ಯಾಧಿಕಾರಿ (ಗ್ರೇಡ್) ಎನ್.ವಿ.ಸತ್ಯನ್, ಪರಿಸರವಾದಿ ಕೆ.ಎಂ.ಅನೂಪ್, ವಲಯ ಅರಣ್ಯಾಧಿಕಾರಿಗಳಾದ ಎಂ.ಸುಂದರನ್, ಪಿ.ಸಿ.ಯಶೋದಾ, ಕೆ.ಆರ್.ವಿಜಯನಾಥ್ ಮೊದಲಾದವರು ಮಾಹಿತಿ ನೀಡಿದರು.
ಬೀಟ್ ಅರಣ್ಯಾಧಿಕಾರಿ ಎಂ.ಜೆ.ಅಂಜು, ಎನ್.ಎಸ್ .ಎಸ್ ಕಾರ್ಯಕ್ರಮಾಧಿಕಾರಿ ಶ್ರೀಪತಿ ವಾರಿಯರ್, ಶಿಕ್ಷಕರಾದ ಪಿ.ಎಂ.ಸಜಿ, ಕೆ.ಎಸ್ .ಶ್ರೀಕಲಾ, ಲಿಜೋ ಸೆಬಾಸ್ಟಿಯನ್, ಎನ್.ಎಸ್.ಎಸ್ ಸ್ವಯಂಸೇವಕರಾದ ನಂದಗೋಪಾಲ್ ಮುಂತಾದವರು ಮಾತನಾಡಿದರು.