ಜಿಲ್ಲೆ

ಹುಲಿ ಉಗುರು ಪ್ರಕರಣ; ಪ್ರಭಾವಿ ಬಿಜೆಪಿ ನಾಯಕನ ಮನೆಯಲ್ಲಿ ಅರಣ್ಯಾಧಿಕಾರಿಗಳ ಶೋಧ

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದು, ಗುರುವಾರ ಬಿಜೆಪಿ ಪ್ರಭಾವಿ ಮುಖಂಡ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್​ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಬೆಳಗ್ಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ನಗರದ ನಾಕಾ ಬಳಿ ಇರುವ ವಿಜುಗೌಡರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಅವರ ಪುತ್ರ ಶಾಶ್ವತಗೌಡ ರದ್ದು ಎನ್ನಲಾದ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್ ಪರಿಶೀಲಿಸುತ್ತಿದ್ದಾರೆ.

ಇತ್ತೀಚಿಗೆ ಬಿಜಪಿ ಮುಖಂಡ ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಪೆಂಡೆಂಟ್​ನಲ್ಲಿ ಹುಲಿ ಉಗುರು ಹಾಕಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜುಗೌಡ ಪಾಟೀಲ್ ಹೇಳಿದ್ದೇನು?

ಅದೊಂದು ಹಳೆಯ ಲಾಕೆಟ್ ಆಗಿದ್ದು, ವಾಸ್ತು ಹಿನ್ನೆಲೆ ಈ ಹಿಂದೆ ಶಾಶ್ವತಗೌಡರು ಧರಿಸುತ್ತಿದ್ದರು. ಇದೀಗ ಅದನ್ನು ಬಳಸುತ್ತಿಲ್ಲ ಎಂದು ಅಧಿಕಾರಿಗಳಿಗೆ ಬಿಜೆಪಿ ನಾಯಕ ವಿಜುಗೌಡ ಪಾಟೀಲ್​ ಮಾಹಿತಿ ನೀಡಿದ್ದಾರೆ.