ಸಂಡೂರಲ್ಲಿ ತಹಸೀಲ್ದಾರ್ ಜಿ.ಅನಿಲ್‌ಕುಮಾರ್‌ಗೆ ಕಿಸಾನ್ ಸಭಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಗಿರಿರಾವ್, ಕಾರ್ಯದರ್ಶಿ ಆರ್.ಸ್ವಾಮಿ, ಉಪಾಧ್ಯಕ್ಷ ಅನಿಲ್ ಸ್ವಾಮಿ, ರಾಜ್ಯ ಸದಸ್ಯ ಕೆ.ನಿಂಗಪ್ಪ ಇತರರಿದ್ದರು. 
ಜಿಲ್ಲೆ

ಅರಣ್ಯ ರೈತರ ಜಮೀನು ಸಕ್ರಮಗೊಳಿಸಿ

Gangavati - Desk - Veeresh S Ullagaddi

ಸಂಡೂರು: ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಲು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ಸ್ಥಳೀಯ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.


ಅರಣ್ಯ ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ಬಡ ರೈತರು ಜಮೀನುಗಳ ಸಕ್ರಮಕ್ಕೆ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ.

ಸಂಡೂರು ಅರಣ್ಯ ಪ್ರದೇಶವು ಸರ್ವೇ ಸೆಟಲ್ ಮೆಂಟ್ ಆಗದಿದ್ದರಿಂದ 60-70 ವರ್ಷಗಳಿಂದ ಸಾಗುವಳಿದಾರರಿಗೆ ತೊಂದರೆಯಾಗುತ್ತಿದೆ ಎಂದು ಕಿಸಾನ್ ಸಭಾ ಅಧ್ಯಕ್ಷ ಗಿರಿರಾವ್ ಆಕ್ರೋಶ ವ್ಯಕ್ತಪಡಿಸಿದರು.


ಸಾಗುವಳಿ ಭೂಮಿ ನಂಬಿ ಬದುಕು ಕಟ್ಟಿಕೊಂಡಿರುವ ರೈತರು ಅರಣ್ಯ ಕಾಯ್ದೆಯಿಂದ ವಂಚಿತರಾಗಿದ್ದಾರೆ. ಅವರನ್ನು ಕಾಪಾಡಬೇಕಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಮರು ಪರಿಶೀಲಿಸಬೇಕು.

ರೈತರಿಗೆ ಪಟ್ಟಾ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಜಿ.ಅನಿಲ್ ಕುಮಾರಗೆ ಮನವಿ ಸಲ್ಲಿಸಲಾಯಿತು. ರೈತರಾದ ನಾಗರಾಜ್, ಸಿದ್ದಪ್ಪ, ವಿಜಯಕುಮಾರ್, ನರಸಪ್ಪ, ಬಡೇನ್ ಸಾಬ್, ಹನುಮಂತಪ್ಪ, ರಾಮಪ್ಪ ಇತರರಿದ್ದರು.