ರಾಯಚೂರು: ರಾಜ್ಯದ ಹಲವೆಡೆ ಮಳೆ ಆರ್ಭಟ ಮುಂದುವರಿದಿದ್ದು, ರಾಯಚೂರಿನಲ್ಲಿ ಸಿಡಿಲು ಬಡಿದು ಮೇಕೆ ಮತ್ತು ಕುರಿಗಳು ಬಲಿಯಾಗಿವೆ.
ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಮಂಗಳವಾರ ಭಾರೀ ಮಳೆ ಸುರಿದಿದ್ದು, ಈ ವೇಳೆ ಸಿಡಿಲಿಗೆ 11 ಮೇಕೆ ಹಾಗೂ 6 ಕುರಿಗಳು ಬಲಿಯಾಗಿವೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ನಾಳೆಯಿಂದ ರಾಜ್ಯಾದ್ಯಂತ ಭಾರೀ ಮಳೆಯಾಗಲಿದ್ದು, ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಜತೆ ಬಿರುಗಾಳಿ ಬೀಸಲಿದ್ದು, ಈ ವೇಳೆ ಮತ್ತಷ್ಟು ಗುಡುಗು ಸಿಡಿಲಿನಿಂದ ಅನಾಹುತವಾಗಬಹುದೆಂದು ಎರಡು ಮೂರು ದಿನಗಳ ಕಾಲ ಮನೆಯಿಂದ ಹೆಚ್ಚು ಹೊರಬಾರದಿರಲು ಸೂಚನೆ ನೀಡಲಾಗಿದೆ. ಅಲ್ಲದೇ ಜಾನುವಾರುಗಳನ್ನು ಹೊರಕರೆತರದಂತೆ ಎಚ್ಚರಿಸಲಾಗಿದೆ. (ದಿಗ್ವಿಜಯ ನ್ಯೂಸ್)