ಹರಪನಹಳ್ಳಿ ತಾಲೂಕಿನ ಅನಂತನಹಳ್ಳಿಯ ಆದರ್ಶ ಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ಡಿ.ರಾಮನಮಲಿ ಉದ್ಘಾಟಿಸಿದರು. ಸಾಹಿತಿ ಇಸ್ಮಾಯಿಲ್ ಎಲಿಗಾರ, ಎಚ್.ಕೆ.ಚಂದ್ರಪ್ಪ, ಕೆ.ಉಚ್ಚೆಂಗೆಪ್ಪ, ಪಿ.ಕರಿಬಸಪ್ಪ, ಜಿ.ಮಹಾದೇವಪ್ಪ, ರಾಘವೇಂದ್ರಶೆಟ್ಟಿ ಇತರರು ಇದ್ದರು. 
ಜಿಲ್ಲೆ

ನೆಲ, ಜಲ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿ

ಹರಪನಹಳ್ಳಿ: ಕನ್ನಡ ನೆಲ, ಜಲ ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕಿದ್ದು, ಕೆಲಸದ ನಡುವೆ ಕನ್ನಡ ಸೇವೆಗಾಗಿ ಸಮಯ ಮೀಸಲಿಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ರಾಮನಮಲಿ ಹೇಳಿದರು.

ದತ್ತಿ ಕಾರ್ಯಕ್ರಮ

ತಾಲೂಕಿನ ಅನಂತನಹಳ್ಳಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಚ್. ಬಸಪ್ಪ, ಬೆಣ್ಣಿಹಳ್ಳಿ ಚಪ್ಪರದಹಳ್ಳಿ ಬಸಮ್ಮ ಕೆಂಚಪ್ಪ, ಹೊಸಮನಿ ಬಾಗಳಿ ಚಿದಾನಂದ ಧರ್ಮಪತ್ನಿ ಶಿವಗಂಗಮ್ಮ, ಶಿವಮೊಗ್ಗದ ನಾಗರಾಜಪ್ಪ, ಮೇಘರಾಜ ಜೈನ್, ಡಾ.ಎನ್. ರಾಮಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಯುವತಿಯರು ಗುಡಿ ಮುಂದೆ ನಿಲ್ಲುವುದನ್ನು ಬಿಟ್ಟು, ಗ್ರಂಥಾಲಯದಲ್ಲಿ ಪುಸ್ತಕ ಓದಿದರೆ ಜ್ಞಾನ ಹೆಚ್ಚುತ್ತದೆೆ. ಪ್ರತಿ 40 ಕೀ.ಮೀಗೆ ವೈವಿಧ್ಯಮಯ ಕನ್ನಡ ಭಾಷೆ ಮಾತನಾಡುವವರು ಇದ್ದು, ವಿವಿಧತೆಯಲ್ಲಿ ಏಕತೆ ಇರುವ ಭಾಷೆಯಾಗಿದೆ. ಎಲ್ಲರಿಗೂ ಹೊಂದಿಕೊಳ್ಳುವ ಸಹೃದಯಿಗಳು ಕನ್ನಡದವರಾಗಿದ್ದಾರೆ ಎಂದರು.

ಸಾಹಿತಿ ಇಸ್ಮಾಯಿಲ್ ಎಲಿಗಾರ್‌ಮಾತನಾಡಿ, ಇನ್ನೊಬ್ಬರ ಆರೋಗ್ಯ ಉತ್ತಮಗೊಳಿಸಬೇಕೆ ವಿನಃ ಅವರನ್ನು ಹಾಸ್ಯದಿಂದ ನೋಯಿಸಬಾರದು. ರಾಜ್ಯದ ಅನೇಕ ಕಡೆ ರಾಜ ಮನೆತನಗಳು ಆಳ್ವಿಕೆ ಮಾಡಿದಂತೆ ದಾದಣ್ಣ ನಾಯಕನಿಂದ ಆರಂಭವಾಗಿ ರಾಜ ಸೋಮಶೇಖರ ನಾಯಕ ಸೇರಿ 16 ಜನ ಪಾಳೆಗಾರರು ಹರಪನಹಳ್ಳಿಯನ್ನು ಆಳ್ವಿಕೆ ಮಾಡಿದ್ದಾರೆ. ಉಚ್ಚಂಗಿ ದುರ್ಗವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಇತಿಹಾಸವಿದೆ. ಚಿತ್ರದುರ್ಗದ ಇತಿಹಾಸ ಸಿಗುತ್ತಿದೆ, ಆದರೆ ಹರಪನಹಳ್ಳಿ ಪಾಳೆಗಾರರ ಇತಿಹಾಸ ಸಿಗದಿರುವುದು ದೊಡ್ಡ ದುರಂತವಾಗಿದೆ. ರಾಜ್ಯದ ಕೃಷಿಕ ವರ್ಗ ಹಾಗೂ ಪಶು ಸಂಗೋಪನೆ ಮಾಡುವ ಹೆಚ್ಚಿನ ಪ್ರದೇಶಗಳಲ್ಲಿ ಕಲ್ಲೇಶ್ವರನ ದೇವಸ್ಥಾನಗಳು ನಿರ್ಮಾಣವಾಗಿವೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪರಿಚಯಿಸಲು ದತ್ತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ದತ್ತಿಗಳನ್ನು ಹೆಚ್ಚು ನೀಡುವ ಮೂಲಕ ಸಾಹಿತ್ಯ ಪರಿಷತ್‌ನ್ನು ಬಲಗೊಳಿಸಲಾಗುವುದು ಎಂದರು. ಬಿಸ್‌ಎನ್‌ಎಲ್ ನಿವೃತ್ತ ನೌಕರ ಕೆ.ಆರ್.ಸುಧಾಕರ, ಮುಖ್ಯ ಶಿಕ್ಷಕ ಎಚ್.ಕೆ.ಚಂದ್ರಪ್ಪ ಮಾತನಾಡಿದರು.

ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ, ಎಸ್ಡಿಎಂಸಿ ಅಧ್ಯಕ್ಷೆ ಶೀಲಾನಾಯ್ಕ, ಶಿಕ್ಷಕರಾದ ರೇವಣಸಿದ್ದಪ್ಪ, ಮಲ್ಲಮ್ಮ, ದಾದ ಸಲಾಂ, ಪರ್ವಿನ್‌ಬಾನು, ಅನಿತಾ, ಸಂತೋಷ, ಪುಷ್ಪಾ, ಪ್ರಿಯಾಂಕ, ನಾಗರಾಜ, ಮಂಜುನಾಥ, ಷಣ್ಮುಖ, ನೂರ್ ಜಹಾನ್ ಇತರರು ಇದ್ದರು.