ದೇವದುರ್ಗದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಪೌರಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಕ್ಕೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಸದಸ್ಯರಾದ ಮಾನಪ್ಪ ಮೇಸ್ತ್ರಿ, ಖಾಜಾಹುಸೇನ್, ನಾಗರಾಜ ಪಾಟೀಲ್, ಗಂಗಾಧರ್ ಇದ್ದರು. 
ಜಿಲ್ಲೆ

ಪೌರಕಾರ್ಮಿಕರಿಗೆ ವಿವಿಧ ಸ್ಪರ್ಧೆ ಆಯೋಜನೆ

Kopala - Desk - Eraveni

ದೇವದುರ್ಗ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಪುರಸಭೆಯಿಂದ ಪೌರ ಕಾರ್ಮಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮುಖ್ಯಾಧಿಕಾರಿ ಕೆ.ಹಂಪಯ್ಯ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರಿಗೆ ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕ್ರೀಡಾಕೂಟ ಆಯೋಜಿಸಲಾಗಿದೆ. ವರ್ಷವಿಡಿ ಶ್ರಮಪಟ್ಟು ಕೆಲಸ ಮಾಡುವಂಥ ಪೌರಕಾರ್ಮಿಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ನೋವು ಮರೆತು ನಲಿಯಬೇಕು.

ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯವಾಗಿದ್ದು ಕ್ರೀಡಾಕೂಟದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಹೇಳಿದರು. ನಂತರ ಕಬಡ್ಡಿ, ಕ್ರಿಕೆಟ್, ಖೋಖೋ, ವಾಲಿಬಾಲ್, ಕುರ್ಚಿ ಆಟ ಸೇರಿ ವಿವಿಧ ವೈಯಕ್ತಿಕ ಆಟಗಳನ್ನು ಆಡಿಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಸದಸ್ಯರಾದ ಮಾನಪ್ಪ ಮೇಸ್ತ್ರಿ, ಖಾಜಾಹುಸೇನ್, ನಾಗರಾಜ ಪಾಟೀಲ್, ಗಂಗಾಧರ್, ರಂಗಪ್ಪ, ಲಕ್ಷ್ಮಣ ಇದ್ದರು.