ಅರಕೇರಾ ಎಸ್‌ಬಿಐ ಶಾಖೆಯಲ್ಲಿ 68ನೇ ಸಂಸ್ಥಾಪನಾ ದಿನವನ್ನು ಕೇಕ್ ಕತ್ತರಿಸುತ್ತಿರುವ ಮೂಲಕ ಶನಿವಾರ ಆಚರಿಸಲಾಯಿತು. 
ಜಿಲ್ಲೆ

ಬ್ಯಾಂಕ್‌ಗಳಿಗೆ ಗ್ರಾಹಕರೇ ಜೀವಾಳ

Gangavati - Desk - Veeresh S Ullagaddi

ಅರಕೇರಾ: ಉತ್ತಮ ಸೇವೆ ಒದಗಿಸುವ ಮೂಲಕ ಎಸ್‌ಬಿಐ ಗ್ರಾಹಕರಿಗೆ ತುಂಬಾ ಅನುಕೂಲ ಕಲ್ಪಿಸಿದೆ ಎಂದು ಜಿಪಂ ಮಾಜಿ ಸದಸ್ಯ ಡಾ.ಎಚ್.ಎ. ನಾಡಗೌಡ ಹೇಳಿದರು.


ಪಟ್ಟಣದ ಎಸ್‌ಬಿಎ ಶಾಖೆಯಲ್ಲಿ 68ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಶಿಕ್ಷಣ, ಕೃಷಿ ಹಾಗೂ ಇತರ ಅಗತ್ಯ ಕಾರಣಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಎಸ್‌ಬಿಐ ಉತ್ತಮ ಸ್ಪಂದನೆ ನೀಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಬ್ಯಾಂಕ್‌ನಿಂದ ಅನೇಕ ಸೌಲಭ್ಯಗಳು ಸಿಗುತ್ತಿವೆ. ಬ್ಯಾಂಕ್‌ಗಳು ಸುತ್ತಮುತ್ತಲಿನ ಹಳ್ಳಿ ಜನರ ಅಭಿವೃದ್ಧಿಗೆ ಸಹಕಾರಿಯಾಗಿವೆ. ಬ್ಯಾಂಕ್‌ಗಳಿಗೆ ಗ್ರಾಹಕರೇ ಜೀವಾಳವಾಗಿದ್ದು ಸಿಬ್ಬಂದಿ ಮತ್ತು ಗ್ರಾಹಕರ ಉತ್ತಮ ಬಾಂಧವ್ಯದಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಿಬ್ಬಂದಿ ತೇಜಸ್, ಪ್ರೀತಮ್, ವಿರೂಪಾಕ್ಷಯ್ಯ ಸ್ವಾಮಿ, ವಿರೂಪಾಕ್ಷಿ ಕುಂಬಾರ ಇತರರಿದ್ದರು.