ನೆಲ್ಯಾಡಿಯ ಅಯ್ಯಪ್ಪ ಬೆಟ್ಟದ ಶಬರೀಶ ಕಲಾಮಂದಿರದಲ್ಲಿ ಫೂಟ್ ಪಲ್ಸ್ ಥೆರಪಿ ಉಚಿತ ಶಿಬಿರ ಉದ್ಘಾಟನೆಗೊಂಡಿತು. 
ಜಿಲ್ಲೆ

ಅಡ್ಡ ಪರಿಣಾಮಗಳಿಲ್ಲದ ವೈದ್ಯ ಪದ್ಧತಿ ಆಯ್ಕೆ: ಡಾ.ಸದಾನಂದ ಕುಂದರ್ ಅನಿಸಿಕೆ

ಸೌಮ್ಯ ಆರ್

ನೆಲ್ಯಾಡಿ: ನಿತ್ಯ ದೇವರಲ್ಲಿ ಪ್ರಾರ್ಥಿಸುವುದು ಅರೋಗ್ಯ ಪೂರ್ಣ ಬದುಕಿಗಾಗಿ. ಆದರೆ ಕಲುಷಿತ ಆಹಾರ, ವಿಚಾರಗಳು ಬದುಕನ್ನು ಹಾಳುಗೆಡಹುತ್ತಿವೆ. ಅನಾರೋಗ್ಯವನ್ನು ಸರಿಪಡಿಸಲು ಅಡ್ಡ ಪರಿಣಾಮಗಳಿಲ್ಲದ ವೈದ್ಯ ಪದ್ಧತಿಯನ್ನು ಆಯ್ದುಕೊಳ್ಳುವುದು ಸೂಕ್ತ ಎಂದು ನೆಲ್ಯಾಡಿಯ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್ ನುಡಿದರು.

ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾಕೇಂದ್ರದಲ್ಲಿ ಆರಂಭಗೊಂಡ ಫೂಟ್ ಪಲ್ಸ್ ಥೆರಪಿ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನೆಮ್ಮದಿ ವೆಲ್‌ನೆಸ್ ಸೆಂಟರ್ ಮಾಲೀಕ ಕೆ.ಪ್ರಭಾಕರ ಸಾಲ್ಯಾನ್ ಫೂಟ್ ಪಲ್ಸ್ ಥೆರಪಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್ ಉಪಸ್ಥಿತರಿದ್ದರು.

ಕೌಕ್ರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಬಾಣಜಾಲ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ವಂದಿಸಿದರು, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ನಿರೂಪಿಸಿದರು.