ಕೊಕ್ಕರ್ಣೆ: ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಕೊಡ ವಾಡಿದ ಪೌಷ್ಟಿಕ ಆಹಾರದ ಕಿಟ್‌ನ್ನು ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ ಮೂವರು ಕ್ಷಯ ರೋಗಿಗಳಿಗೆ ಹಸ್ತಾಂತರಿಸಿದರು. ಬ್ರಹ್ಮಾವರ ತಾಲೂಕು ಕ್ಷಯ ಟಕ ಮೇಲ್ವಿಚಾರಕ ಮಂಜುನಾಥ್ ಕಿಟ್ ವಿತಿಸಿದರು. ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರಿನ ಸಿಎಡಿಎಸ್ ಫೌಂಡೇಶನ್ ಕೊಡವಾಡಿದ ಇಸಿಜಿ ಯಂತ್ರವನ್ನು ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ ಉದ್ಘಾಟಿಸಿದರು. ಎಲ್‌ಟಿಒ ಜಮೀರ್, ನರ್ಸಿಂಗ್ ಆಫೀಸರ್, ಸಮುದಾಯ ಆರೋಗ್ಯ ಅಧಿಕಾರಿಗಳು, ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುವಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.