ಜಾನಪದ ಉತ್ಸವವನ್ನು ರಘುರಾಮ ಶೆಟ್ಟಿ ಊರಬೈಲು ಉದ್ಘಾಟಿಸಿದರು.  
ಜಿಲ್ಲೆ

ಶ್ರಮ ಜೀವಿಗಳ ಸತ್ಫಲವೇ ಜಾನಪದ

Karthika K.S

ವಿಜಯವಾಣಿ ಸುದ್ದಿಜಾಲ ಉಡುಪಿ

ಬದುಕಿನ ಏರಿಳಿತ ಅನುಭವಿಸುತ್ತ ಅದರ ಸಿಹಿ-ಕಹಿಗಳನ್ನು ಕರಗಿಸಿ ಎರಕ ಹೊಯ್ದಂತೆ ನೆಲಕ್ಕೆ ಅಂಟಿಕೊಂಡು ಬದುಕಿದ ಶ್ರಮ ಜೀವಿಗಳ ಶ್ರಮ ಸಂಭ್ರಮದ ಸತ್ಫಲವೇ ಜಾನಪದವಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ರುರಾಮ ಶೆಟ್ಟಿ ಊರಬೈಲು ಹೇಳಿದರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಉತ್ಸವ ‘ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ’ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಯಪ್ರಕಾಶ ಶೆಟ್ಟಿ ಎಚ್. ಮಾತನಾಡಿ, ಕೋಟೆ ಕಟ್ಟಿಕೊಂಡು ಬದುಕಿದ ರಾಜರು ಮತ್ತು ಸಿರಿವಂತರ ಬಾಳಿಗಿಂತ ಭಿನ್ನವಾಗಿ ಬದುಕಿದವರು ಜಾನಪದರು. ಬಾಗಿಲು ತೆರೆದುಕೊಂಡೇ ಬದುಕಿದ ಜಾನಪದ ಜಗತ್ತು, ಒಳಗೊಳ್ಳುವಿಕೆಯ ಪ್ರಜಾಸತ್ತಾತ್ಮಕ ವಾದರಿಯ ಜೀವಪರ ಗುಣವುಳ್ಳದ್ದಾಗದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿ ನಾಯಕರಾದ ರಕ್ಷಿತಾ, ವಿನುತಾ, ಓಂಕಾರ, ಕೌಶಿಕ್ ಹಾಗೂ ದೀಕ್ಷಾ ಉಪಸ್ಥಿತರಿದ್ದರು.

ವಿಖ್ಯಾತ್ ಕುಲಾಲ್ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ. ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಮೀನಾಕ್ಷಿ ನಾಯ್ಕ ವಂದಿಸಿದರು. ರವಿಚಂದ್ರ ಬಾಯಿರಿ ಕೆ. ನಿರೂಪಿಸಿದರು.

ಜಾನಪದ ಉತ್ಸವ ಅಂಗವಾಗಿ ಸ್ಥಳೀಯ ಆಹಾರ ವೈವಿಧ್ಯಗಳ ಆಹಾರ ಮೇಳ, ಜಾನಪದ ವಸ್ತುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.