ಜಿಲ್ಲೆ

ಕವಿನುಡಿ ವಾಚನದಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ

ಸೌಮ್ಯ ಆರ್

ಸುಳ್ಯ: ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಆಯೋಜಿಸಿದ್ದ ಕವಿನುಡಿ ಪ್ರೇರಣಾ ನುಡಿಗಳ ವಿಡಿಯೋ ವಾಚನಾ ಸ್ಪರ್ಧೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯಿತಿಯ ಅಕ್ಷತಾ ನಾಗನಕಜೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರಿಗೆ ಡಿ.9ರಂದು ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಕವಿಗಳಿಂದ ಸ್ಥಳದಲ್ಲಿಯೇ ದಾಖಲೆ ಬರಹ ಕಾರ್ಯಕ್ರಮಕ್ಕೂ ಇವರು ಆಯ್ಕೆಯಾಗಿದ್ದಾರೆ.