ಸಿಂಧನೂರಿನಲ್ಲಿ ಆಯೋಜಿಸಿದ್ದ ಉಪನ್ಯಾಸಕರಿಗೆ ವಿಭಾಗ ಮಟ್ಟದ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ತರಬೇತಿ ಕಾರ್ಯಾಗಾರವನ್ನು ರಾಯಚೂರು ಡಿಡಿಪಿಯು ಡಿ.ಕೆ.ಜಯರಾಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಎಸ್.ಶಿವರಾಜ, ಅರ್ಥಶಾಸ್ತ್ರ ವಿಷಯದ ಸಂಚಾಲಕ ಬಸಪ್ಪ ಅಂಬಾಮಠ, ಮಾನವಿ ಕಾಲೇಜಿನ ಪ್ರಾಚಾರ್ಯ ಡಾ.ಕುಂಟೆಪ್ಪ, ಕೊಪ್ಪಳದ ಡಾ. ಫಕೀರಪ್ಪ ವಜ್ರಬಂಡಿ ಇತರರಿದ್ದರು. 
ಜಿಲ್ಲೆ

ಫಲಿತಾಂಶ ಸುಧಾರಣೆಯತ್ತ ಚಿತ್ತವಿರಲಿ

ಸಿಂಧನೂರು: ಉಪನ್ಯಾಸಕರು ಕಾರ್ಯಾಗಾರದಲ್ಲಿ ವಿಷಯ ತಜ್ಞರು ಹೇಳುವ ಸರಳ ತಂತ್ರಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಮುಂದಾಗಬೇಕು ಎಂದು ರಾಯಚೂರು ಡಿಡಿಪಿಯು ಡಿ.ಕೆ.ಜಯರಾಮ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರಿನಿಂದ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸಕರಿಗೆ ವಿಭಾಗಮಟ್ಟದ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವತ್ತ ಚಿತ್ತವಿರಬೇಕು. ವಿಷಯದ ಬಗ್ಗೆ ಆಸಕ್ತಿ ಮೂಡಿಸುವ ಬೋಧನೆ ಕ್ರಮಗಳಿರಬೇಕು. ಸರಳ ಅಧ್ಯಯನ ಕ್ರಮದಿಂದ ಓದುವ ಹವ್ಯಾಸ ಬೆಳೆಸಬೇಕು ಎಂದರು.

ಪ್ರಾಚಾರ್ಯ ಡಾ.ಎಸ್.ಶಿವರಾಜ ಮಾತನಾಡಿ, ಇಂಥ ಕಾರ್ಯಾಗಾರಗಳಿಂದ ಉಪನ್ಯಾಸಕರ ಬೋಧನಾ ಮಟ್ಟ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಉಪನ್ಯಾಸಕರು ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಅರ್ಥಶಾಸ್ತ್ರ ವಿಷಯ ತರಬೇತಿ ಸಂಚಾಲಕ ಬಸಪ್ಪ ಅಂಬಾಮಠ, ಪ್ರಾಚಾರ್ಯರಾದ ಡಾ.ಕುಂಟೆಪ್ಪ, ಡಾ.ಫಕೀರಪ್ಪ ವಜ್ರಬಂಡಿ, ಪ್ರಕಾಶ ಬ್ಯಾಗವಾಟ, ಕೆ.ಎಂ.ಶರಣಯ್ಯ, ಅಜಗರ್ ಪಾಶಾ, ಪ್ರಾಚಾರ್ಯರಾದ ಸರೋಜಾದೇವಿ, ನಿವೃತ್ತ ಪ್ರಾಚಾರ್ಯರಾದ ವೀರುಪನಗೌಡ, ಕೊಪ್ಪಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ಪ್ರಮುಖರಾದ ಪ್ರೊ.ಎಲ್.ಜಿ.ಕುಂಬಾರ್, ಬಳ್ಳಾರಿಯ ಡಾ.ಎರ‌್ರಿಯಪ್ಪ, ಶಾಮೀದ್, ಶಂಕರಗೌಡ ಅಲಬನೂರು ಇತರರಿದ್ದರು.