ಹೂವಿನಹಡಗಲಿಯಲ್ಲಿ ನಡೆದ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಹಸ್ರಾರು ಯುವಕರು ಭಾಗವಹಿಸಿ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. 
ಜಿಲ್ಲೆ

ಹೂವಿನಹಡಗಲಿಯಲ್ಲಿ ಮಹಾಗಣಪತಿ ಶೋಭಾಯಾತ್ರೆ ವೈಭವ

ಹೂವಿನಹಡಗಲಿ: ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಬಜರಂಗದಳದಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆ ಶನಿವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಿಂದ ಆರಂಭವಾದ ವಿಸರ್ಜನೆಯ ಮೆರವಣೆಗೆ ಶಾಸ್ತ್ರೀ ವೃತ್ತ, ಓಮ್ ವೃತ್ತ ಉದ್ಭವ ವೃತ್ತ ಹಾಗೂ ಮದಲಘಟ್ಟ ವೃತ್ತ ಮಾರ್ಗವಾಗಿ ಸಾಗಿ, ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯುದ್ದಕ್ಕೂ ಡಿಜೆ ಹಾಡು, ತಮಟೆ ಸದ್ದಿಗೆ ಯುವಕ, ಯುವತಿಯರು ಕೇಸರಿ ಧ್ವಜಗಳ ಹಿಡಿದು ಕುಣಿದು ಕುಪ್ಪಳಿಸಿದರು. ಡಿವೈಎಸ್ಪಿ ಮಹಾಂತೇಶ ಕೊನಬೇವು ನೇತೃತ್ವದ ತಂಡದಲ್ಲಿ ಸ್ಥಳೀಯ ಸಿಪಿಐ ಸುಧೀರ್ ಕುಮಾರ್ ಬೆಂಕಿ ಸೇರಿ ನಾಲ್ಕುಜನ ಸಿಪಿಐಗಳು 11, ಜನ ಪಿಎಸ್‌ಐಗಳು ಹಾಗೂ ಎರಡು ಕೆಎಸ್‌ಆರ್‌ಸಿ ತುಕಡಿಯ ವಾಹನಗಳನ್ನು ಬಂದೋ ಬಸ್ತಿಗೆ ನಿಯೋಜಸಲಾಗಿತ್ತು.