ಬೆಂಗಳೂರು: ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿಯಲ್ಲಿ ಎಡ ಬಿಡದೆ ಮಳೆ ಸುರಿದ ಕಾರಣ ಹಾಗೂ ಹವಾಮಾನ ವೈಪರಿತ್ಯದಿಂದ 14 ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ ಮತ್ತು ಆರು ವಿಮಾನಗಳ ಡಿಪಾರ್ಚರ್ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 4:05ರಿಂದ 4:51ರವರೆಗೆ ಗುಡುಗು ಸಹಿತ ಬಾರಿ ಮಳೆಯಾದ ಕಾರಣ ವಿಮಾನನಗಳ ಹಾರಾಟದ ಮೇಲೆ ಪ್ರಭಾವ ಬೀರಿದೆ. ಒಟ್ಟು 12 ವಿಮಾನಗಳನ್ನು ಚೆನೈಗೆ, 1 ಕೊಯಮತ್ತೂರಿಗೆ ಮತ್ತು ಪೊಂದನ್ನು ಹೈದರಾಬಾದಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಲ್ಲಿ 7 ಇಂಡಿಗೋ, 3 ವಿಸ್ತಾರ, 2 ಆಕಾಶ ಏರ್ಲೈನ್ಸ್, ಮತ್ತು ಏರ್ ಇಂಡಿಯಾ, ಗೋ ಏರ್ ಕಂಪನಿಗೆ ಸೇರಿದ್ದ ತಲಾ ಒಂದು ವಿಮಾನಗಳಿದ್ದವು ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ ದೇವನಹಳ್ಳಿಯಲ್ಲಿ 45.2ಮಿಮಿ ಮಳೆಯಾಗಿದ್ದು ಭಾರೀ ಮಳೆಯಿಂದಾಗಿ ಜನಜೀವನ ಅಸ್ತನವ್ಯಸ್ತಗೊಂಡಿದೆ. ಮತ್ತೊಂದೆಡೆ ನಗರದ ಕೆಲ ಭಾಗಗಳಲ್ಲಿ ಮಳೆಯಾಗಿಲ್ಲ.