ಜಿಲ್ಲೆ

ಒಂದೇ ಕುಟುಂಬದ ಐವರ ಆತ್ಮಹತ್ಯೆ; ಹಾಲ್​-ರೂಮ್​ನಲ್ಲೂ ನೇತಾಡುತ್ತಿದ್ದ ಶವ..!

Webdesk - Ravikanth

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಹಾಲ್​ ಹಾಗೂ ರೂಮ್​ನಲ್ಲೂ ಶವಗಳು ಕಂಡುಬಂದಿವೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಶ್ರೀಕಾಂತ್ ಎಂಬವರ ಮನೆಯಲ್ಲಿ ಈ ದುರಂತ ನಡೆದಿದೆ. ಶ್ರೀಕಾಂತ್ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೇಣುಹಾಕಿಕೊಂಡಿದ್ದಾರೆ.

ಮನೆಯ ಹಾಲ್​ನಲ್ಲಿ ಹೆಂಡತಿ ಹಾಗೂ ರೂಮ್​ನಲ್ಲಿ ಮಗಳು ನೇಣು ಹಾಕಿಕೊಂಡಿದ್ದು, ಈ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಆತ್ಮಹತ್ಯೆ ಯತ್ನದಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಕುರಿತು ಮತ್ತಷ್ಟು ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.