ಕುಕನೂರು ತಾಲೂಕಿನ ಬೆಣಕಲ್ ಗ್ರಾಪಂಗೆ ಅಧ್ಯಕ್ಷೆ ಲಕ್ಷ್ಮವ್ವ ನಡುವಲಮನಿ ಹಾಗೂ ಉಪಾಧ್ಯಕ್ಷೆಯಾಗಿ ವಿದ್ಯಾ ತಳವಾರ ಆಯ್ಕೆಯಾದರು. ಸದಸ್ಯರಾದ ಮಲ್ಲಪ್ಪ ಬಳಗೇರಿ, ಚೆನ್ನಪ್ಪ ವಜ್ರಬಂಡಿ, ಶ್ರೀಕಾಂತ ಕರಿಗಾರ, ಅನ್ನವ್ವ ತಿಪ್ಪಅರಸನಹಾಳ, ಕಸ್ತೂರೆವ್ವ ಅಂಚನಾಳ ಇದ್ದರು. 
ಜಿಲ್ಲೆ

ಐದು ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ನಾಲ್ಕು ಪಂಚಾಯಿತಿಯಲ್ಲಿ ಮಹಿಳೆಯರ ಮೇಲುಗೈ

ಕುಕನೂರು: ತಾಲೂಕಿನ ರಾಜೂರು, ಬೆಣಕಲ್, ಇಟಗಿ, ಬನ್ನಿಕೊಪ್ಪ, ಹಿರೇಬೀಡಿನಾಳ ಗ್ರಾಪಂಗಳ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.


ರಾಜೂರು: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಹುಲ್ಲವ್ವ ಹಿರೇಮನಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಮಾದಿನೂರು ಹಾಗೂ ಬಸವರೆಡ್ಡಿ ಬೀಡಿನಾಳ ಸಮಬಲ ತಲಾ 8 ಮತ ಪಡೆದರು. ನಂತರ ಚೀಟಿ ಎತ್ತುವ ಮೂಲಕ ವಿಜಯಕುಮಾರರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


ಬೆಣಕಲ್: ಗ್ರಾಪಂ ಅಧ್ಯಕ್ಷೆ ಸ್ಥಾನಕ್ಕೆ ಎಸ್ಸಿ ಮೀಸಲಾತಿಯ ಲಕ್ಷ್ಮವ್ವ ನಡುವಲಮನಿ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ವಿದ್ಯಾ ತಳವಾರ ಅವಿರೋಧವಾಗಿ ಆಯ್ಕೆಯಾದರು.


ಬನ್ನಿಕೊಪ್ಪ: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಈರಪ್ಪ ಗೊಂದಿ ಹಾಗೂ ನಾಗರಾಜ ವೆಂಕಟಾಪುರ ನಾಮಪತ್ರ ಸಲ್ಲಿಸಿದ್ದರು. ಈರಪ್ಪ ಗೊಂದಿ 8 ಮತ ಪಡೆದು ಅಧ್ಯಕ್ಷರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಹನುಮವ್ವ ಆಲೂರು ಹಾಗೂ ಹುಲಿಗೆವ್ವ ನಾಮಪತ್ರ ಸಲ್ಲಿಸಿದ್ದರು. ಹನುಮವ್ವ ಆಲೂರು 8 ಮತ ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.


ಇಟಗಿ: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲಾ ಹಿರೇಮನಿ ಹಾಗೂ ಉಪಾಧ್ಯಕ್ಷೆಯಾಗಿ ಸುವರ್ಣ ಕುರಿ ಅವಿರೋಧವಾಗಿ ಆಯ್ಕೆಯಾದರು.
ಹಿರೇಬೀಡಿನಾಳ: ಗ್ರಾಪಂ ಅಧ್ಯಕ್ಷೆ ಯಮನವ್ವ ಕೊಪ್ಪಳ ಹಾಗೂ ಉಪಾಧ್ಯಕ್ಷೆಯಾಗಿ ಸರಸ್ವತೆವ್ವ ಹರಿಜನ ಅವಿರೋಧ ಆಯ್ಕೆಗೊಂಡರು.